Belagavi NewsBelgaum NewsElection NewsKannada NewsKarnataka NewsPolitics

*ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಯತ್ನಿಸಿದ ಸಂಜಯ ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಹಗುರವಾಗಿ ನಾನು ಎಲ್ಲಿಯೂ ಮಾತಾಡಿಲ್ಲ. ಒಂದು ಪೆಗ್ ಬಗ್ಗೆ ಮಾತಾಡಿದ್ದೇನೆ. ಎಲ್ಲಿಯೂ ಅವರ ಹೆಸರು ಹೇಳಿಲ್ಲ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದ್ದಾರೆ.

ನಿನ್ನೆ ಹಿಂಡಲಗಾದಲ್ಲಿ ಮಾಡಿದ ಭಾಷಣದಲ್ಲಿ ವಿವಾದ ಆಗಿರುವ ಕುರಿತು ಇಂದು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಕ್ಕಾ ಅಂದ್ರೆ ಅವರೇ ಅಂತ ಯಾಕೆ ತಿಳಿದುಕೊಳ್ಳುತ್ತೀರಾ, ಪೆಗ್ ಅಂದ್ರೆ ಶೆರೆ ಅಂತಾ ಯಾಕೆ ತಿಳ್ಕೊತೀರಿ, ಪೆಗ್ ಅಂದ್ರೆ ಎನರ್ಜಿ ಡ್ರಿಂಕ್ ಎಂದು ತಮ್ಮನ್ನು ತಾವು ಸಂಜಯ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.‌

ಮುಂದುವರೆದು ಮಾತನಾಡಿದ ಅವರು, ನನಗೂ ತಾಯಿ ಇದ್ದಾಳೆ, ಮಗಳಿದ್ದಾಳೆ ಮಹಿಳೆಯರ ಬಗ್ಗೆ ನನಗೂ ಗೌರವ ಇದೆ. ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ನಾನು ಕೆಟ್ಟ ಮಾತಾಡಿಲ್ಲ. ಮಹಿಳೆಯರಿಗೆ ಅವಮಾನ ಆಗಿದೆ ಅಂತಾ ಲಕ್ಷ್ಮೀ ಹೆಬ್ಬಾಳಕ‌ರ್ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡೆಸಿಕೊಂಡು ನನ್ನ ಮನೆಗೆ ನೂರಾರು ಮಹಿಳೆಯರನ್ನು ಕಳುಹಿಸಿದ್ದಾರೆ. ನನ್ನ ತಾಯಿಗೆ 90 ವರ್ಷ ವಯಸ್ಸು, ನಾನೂ ಹಾರ್ಟ್ ಪೇಶಂಟ್ ಮಹಿಳೆಯರು ನನ್ನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸುವುದು ಸರಿಯೇ? ಎಂದು ಸಂಜಯ ಪಾಟೀಲ ಪ್ರಶ್ನಿಸಿದ್ದಾರೆ.

ಮಹಿಳೆಯರಿಗೆ ಅವಮಾನ ಆಗಿದೆ ಅಂತಾ ಚಿಕ್ಕೋಡಿ ಕ್ಯಾಂಡಿಡೇಟ್ ಹೇಳುತ್ತಿಲ್ಲ ಖಾನಾಪೂರ ಕ್ಯಾಂಡಿಡೇಟ್ ಹೇಳುತ್ತಿಲ್ಲ. ಲಕ್ಷ್ಮೀ ಹೆಬ್ಬಾಳಕರ್ ಒಬ್ರೇ ಅವಮಾನ ಆಗಿದೆ ಅಂತಾ ಹೇಳುತ್ತಿದ್ದಾರೆ. ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತಾಡುತ್ತಿದ್ದಾರೆ. ಇದು ಇಲೆಕ್ಷನ್ ಎಲ್ಲವನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ಸಂಜಯ ಪಾಟೀಲ ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button