ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಭಿನ್ನಮತ ಬುಗಿಲೇಳುವ ಸೂಚನೆ ಕಂಡುಬಂದಿದೆ. ಶಾಸಕ ಬಿ.ಸಿ.ಪಾಟೀಲ ಈಗಾಗಲೆ ಬಹಿರಂಗವಾಗಿ ಸಿಡಿದೆದ್ದಿದ್ದು, ಮನೆ ಬಾಗಿಲಿಗೆ ಬಂದು ಸಚಿವ ಸ್ಥಾನ ಕೊಡುತ್ತೇನೆಂದರೂ ನನಗೆ ಬೇಡ ಎಂದಿದ್ದಾರೆ.
ಬುಧವಾರ ನಡೆಯಲಿರುವ ಸಂಪುಟ ವಿಸ್ತರಣೆ ವೇಳೆ ಇಬ್ಬರು ಪಕ್ಷೇತರರು ಮತ್ತು ರಾಮಲಿಂಗ ರಡ್ಡಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಹಲವರು ಕೆರಳಿದ್ದಾರೆ.
ಬಹಿರಂಗವಾಗಿ ಮಾತನಾಡಿರುವ ಬಿ.ಸಿ.ಪಾಟೀಲ, ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಹಲವು ಬಾರಿ ಅವಮಾನ ಮಾಡಿದ್ದಾರೆ. ಇನ್ನು ನಾನು ಕೇಳುವುದೂ ಇಲ್ಲ, ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಮುಂದೆ ಏನು ಮಾಡಬೇಕೆಂದು ಸಂದರ್ಭ ಬಂದಾಗ ಹೇಳುತ್ತೇನೆ ಎಂದೂ ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ