*ನನ್ನ ಜೀವನದಲ್ಲೇ ಜಮೀರ್ ಅವರನ್ನು ಕುಳ್ಳ ಎಂದಿಲ್ಲ: ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ನಾನು ಎಂದಿಗೂ ಜೀವನದಲ್ಲೇ ಜಮೀರ್ ಅವರನ್ನು ಕುಳ್ಳ ಎಂದು ಕರೆದಿಲ್ಲ. ಜೊತೆಗೆ, ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತದೆ. ಸಿಎಂ ಹಾಗೂ ಡಿಸಿಎಂ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸರ್ಕಾರ ಅನಾಗರೀಕ ಸರ್ಕಾರ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹರಿಹಾಯ್ದರು.
ಸಚಿವ ಜಮೀರ್ ಅಹ್ಮದ್ ತಮ್ಮನ್ನು ಕಾಲಿಯಾ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ಕೇಂದ್ರಸಚಿವ ಕುಮಾರಸ್ವಾಮಿ ಮೈಸೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಾಯಿ ಮುಂದೆ ನಿಂತಿದ್ದೇನೆ. ನನ್ನ ಮತ್ತು ಜಮೀರ್ ಆತ್ಮೀಯತೆ ರಾಜಕೀಯವಾಗಿ ಮಾತ್ರ. ಇಂತಹ ಹೇಳಿಕೆಯನ್ನು ಅಮಾಯಕರು ಕೊಟ್ಟರೆ ಜೈಲಿಗೆ ಕಳಿಹಿಸುತ್ತಾರೆ. ಇದನ್ನು ಸಹ ಎಸ್‌ಐಟಿಗೆ ಕೊಡಲಿ. ಯಾವ ಸಮಯದಲ್ಲಿ ಯಾರ ಕಾಲು ಹಿಡಿದಿದ್ದರು, ಇವರಲ್ಲಾ ಎಲ್ಲಿದ್ದರು ಎಂದು ನನಗೆ ಗೊತ್ತಿಲ್ವಾ ಎಂದು ಹರಿಹಾಯ್ದರು.
ರಾಜಕೀಯವಾಗಿ ಏನು ನಡೆದಿದೆ ಎಂಬುದನ್ನು ಯೋಗೇಶ್ವರ್ ವಿಮರ್ಶೆ ಮಾಡಿದ್ದಾರೆ. ಜಮೀರ್ ಹೇಳಿಕೆಯಿಂದ ಏನು ವ್ಯತ್ಯಾಸ ಆಗಿಲ್ಲ. ಉತ್ತಮವಾದ ರೀತಿಯಲ್ಲಿ ನಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಎಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ