*‘ನನ್ನ ಪತಿಗೆ ನಾನು ಸ್ಪೆಷಲ್ ಅಂದುಕೊಂಡಿದ್ದೆ, ಆದರೆ…’*: *ಯುವ ಪತ್ನಿ ಶ್ರೀದೇವಿ ಪೋಸ್ಟ್ ವೈರಲ್*

ಪ್ರಗತಿವಾಹಿನಿ ಸುದ್ದಿ: ನಟ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವೈವಾಹಿಕ ವಿವಾದ ಮತ್ತೆ ಚರ್ಚೆಗೆ ಬಂದಿದೆ. ಅಮೆರಿಕದಲ್ಲಿರುವ ಶ್ರೀದೇವಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹೊಸ ರೀಲ್ಸ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ತಮ್ಮ ಹಳೆಯ ಫೋಟೋಗಳನ್ನು ಬಳಸಿಕೊಂಡು ಮಾಡಿರುವ ರೀಲ್ಸ್‌ನಲ್ಲಿ, ಪತಿಯ ಮೊಬೈಲ್‌ನಲ್ಲಿ ತಮ್ಮ ಸಾವಿರಾರು ಫೋಟೋಗಳಿದ್ದವು. ಅದನ್ನು ನೋಡಿ ತಾನು ಪತಿಗೆ ವಿಶೇಷ ವ್ಯಕ್ತಿ ಎಂದು ಭಾವಿಸಿದ್ದೆ ಎಂಬ ಅರ್ಥದಲ್ಲಿ ಶ್ರೀದೇವಿ ಬರೆದುಕೊಂಡಿದ್ದಾರೆ.
ಆದರೆ, ಅದೇ ರೀತಿಯ ಪೋಸ್ ಹಾಗೂ ಫೋಟೋಗಳು ಮತ್ತೊಬ್ಬ ಯುವತಿಯದ್ದೂ ಪತಿಯ ಗ್ಯಾಲರಿಯಲ್ಲಿ ಕಂಡುಬಂದ ಬಳಿಕ ಸತ್ಯ ಅರ್ಥವಾಯಿತು ಎಂಬ ಸಂದೇಶವನ್ನು ಪೋಸ್ಟ್‌ನಲ್ಲಿ ನೀಡಿದ್ದಾರೆ. ಮತ್ತೊಬ್ಬ ಯುವತಿಯನ್ನು ಉದ್ದೇಶಿಸಿ, “ನೀನು ಏನೂ ಸ್ಪೆಷಲ್ ಅಲ್ಲ” ಎಂಬರ್ಥದ ಸಾಲನ್ನೂ ಬರೆದಿದ್ದಾರೆ.
ಫೋಟೋಗಳಿಗೆ ಎಷ್ಟೇ ದೃಷ್ಟಿಬೊಟ್ಟು ಎಮೋಜಿ ಹಾಕಿದರೂ ಯಾವುದೇ ಪ್ರಯೋಜನವಿಲ್ಲ ಎಂಬ ಸಾಲುಗಳನ್ನೂ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೊನೆಯಲ್ಲಿ ‘ಡಿಯರ್ ಹಸ್ಬೆಂಡ್’ ಎಂದು ಬರೆದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಶ್ರೀದೇವಿ ಯಾವ ವ್ಯಕ್ತಿಯನ್ನು ಉದ್ದೇಶಿಸಿ ಈ ಪೋಸ್ಟ್ ಮಾಡಿದ್ದಾರೆ ಎಂಬುದನ್ನು ನೇರವಾಗಿ ಹೇಳಿಲ್ಲ. ಯುವ ರಾಜ್‌ಕುಮಾರ್ ಹೆಸರನ್ನೂ ಪೋಸ್ಟ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ ‘ಡಿಯರ್ ಹಸ್ಬೆಂಡ್’ ಪದ ಬಳಕೆಯಿಂದ ಇದು ಪತಿಗೆ ನೀಡಿದ ಪರೋಕ್ಷ ಸಂದೇಶವೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಅಭಿಮಾನಿಯೊಬ್ಬರು “ಅಪ್ಪು ಸರ್ ಇದ್ದಿದ್ದರೆ ನಿಮ್ಮ ಪರವಾಗಿ ನಿಲ್ಲುತ್ತಿದ್ದರು” ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಶ್ರೀದೇವಿ “100000%” ಎಂದು ರೆಡ್ ಹಾರ್ಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ನಡುವಿನ ಡಿವೋರ್ಸ್ ವಿವಾದ ಈ ಹಿಂದೆ ಹಲವು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ, ಫೋಟೋ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿದ್ದವು. ಇದೀಗ ಹೊಸ ಪೋಸ್ಟ್ ಮತ್ತೆ ವೈವಾಹಿಕ ವಿವಾದದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




