ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಯುವ ವಿದ್ಯಾರ್ಥಿಗಳು ಸಚ್ಛಾರಿತ್ಯ, ಸುಶಿಕ್ಷಿತ, ಸುಸಂಸ್ಕೃತರಾಗಲು ಪರಮಾತ್ಮ- ತಂದೆ ತಾಯಿ- ಗುರು- ಸಮಾಜ- ಭೂತಗಳೆಂಬ ಪಂಚ ಋಣಗಳನ್ನು ಅನುದಿನವೂ ನೆನೆದು ಬದುಕು ಸಾಗಿಸುತ್ತಾ ಭಾರತದ ಭವಿಷ್ಯ ನಿರ್ಮಾಪಕರಾಗಬೇಕು ಎಂದು
ಪದ್ಮಶ್ರೀ ವಿಜೇತ ಇಬ್ರಾಹಿಂ ಸುತಾರ ಹೇಳಿದರು.
ಇಂದು ನಗರದ ಕೆಎಲ್ಇ ಸಂಸ್ಥೆಯ ಗಿಲಗಂಚಿ ಅರಟಾಳ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ೨೦೧೯-೨೦ ನೆಯ ಸಾಲಿನ ವಿವಿಧ ಒಕ್ಕೂಟಗಳ ಹಾಗೂ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನೆ ಮಾಡಿ ಮಾತನಾಡುತ್ತ, ವಿದ್ಯಾರ್ಥಿಗಳಲ್ಲಿ ಗ್ರಹಣ ಶಕ್ತಿ, ಭಾವೈಕ್ಯತೆ, ಸಾಮರಸ್ಯ, ಸಂವಿಧಾನವನ್ನು ಗೌರವಿಸುವ ಗುಣಗಳು ಆಳವಾಗಿ ಒಡಮೂಡಬೇಕು ಎಂದರು.
ವೇದಿಕೆ ಮೇಲೆ ಅಧ್ಯಕ್ಷ ತೆ ವಹಿಸಿದ್ದ ಪ್ರಾಚಾರ್ಯ ರವಿ ಪಾಟೀಲ, ಆಜೀವ ಸದಸ್ಯ ಮಹಾದೇವ ಬಳಿಗಾರ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಎಸ್.ಎಸ್. ಬಿಂಜವಾಡಗಿ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷ ಬಾಗಪ್ಪ ಮಾರದ, ಎ.ಬಿ.ಕೊರಬು ಪರಿಚಯಿಸಿದರು. ಸೋಮು ಮಡಿವಾಳರ, ಹರ್ಷ ಮಹಿಮಗೋಳ, ಜಯಶ್ರೀ ನಿಂಬಾಳಕರ, ಅರುಣಾ ಕಟಕಭಾವಿ, ಗುಂಡ್ಲೂರ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದೇ ವೇಳೆ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿದರು.
ಶೃತಿ ನೀರಲಗಿ ಹಿರೇಮಠ ಹಾಗೂ ಎಸ್. ಎಸ್. ಗಂಗಾಪೂರ ಜಂಟಿಯಾಗಿ ನಿರೂಪಿಸಿದರು. ಡಿ.ಎಸ್. ಪವಾರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ