
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೊನಾ ಸೋಂಕಿಗೆ ಇನ್ನೂ ಔಷಧಿ ಕೂಡ ಪತೆಯಾಗಿಲ್ಲ. ಆದರೆ ಇದೀಗ ದೇಶದಲ್ಲಿ ಮತ್ತೊಂದು ಮಹಾಮಾರಿ ವೈರಸ್ ಲಗ್ಗೆಯಿಟ್ಟಿದೆ. ಕೊರೊನಾಗಿಂತ ಭೀಕರವಾಗಿರುವ ’ಕ್ಯಾಟ್ ಕ್ಯೂ ವೈರಸ್’ ಎಂಬ ಸೋಂಕು ದೇಶದಲ್ಲಿ ಹರಡಲಿದೆ ಎಂಬ ಎಚ್ಚರಿಕೆಯನ್ನು ಐಸಿಎಂ ಆರ್ ನೀಡಿದೆ.
ಚೀನಾದಿಂದಲೇ ಈ ಸೋಮ್ಕು ಕೂಡ ಹರಡುತ್ತಿದ್ದು, ಈಗಾಲೇ ಚೀನಾ ಹಾಗೂ ವಿಯೆಟ್ನಾಮ್ ನಲ್ಲಿ ಈ ವೈರಸ್ ಹರಡುತ್ತಿದೆ. ಭಾರತದಲ್ಲಿ ಕೂಡ ಈ ವೈರಸ್ ಹರಡುತ್ತಿದೆ ಎಂದು ತಿಳಿದುಬಂದಿದೆ.
ಕ್ಯೂಲೆಕ್ಸ್ ಎಂಬ ಸೊಳ್ಳೆಗಳಿಂದ ಈ ವೈರಸ್ ಹರಡುತ್ತಿದ್ದು, ಹಂದಿಗಳಿಗೆ ಕಚ್ಚಿದ ಸೊಳ್ಳೆ ಮನುಷ್ಯರಿಗೆ ಕಚ್ಚಿದರೆ ಈ ಸೋಂಕು ಬರುತ್ತದೆ. ಈ ಸೋಂಕು ಪತ್ತೆಯಾದ ವ್ಯಕ್ತಿ ಮೆದುಳು ಜ್ವರದಿಂದ ಬಳಲುತ್ತಾನೆ. ಕೊರೊನಾ ಬೆನ್ನಲ್ಲೇ ಭಾರತದಲ್ಲಿ ಕ್ಯಾಟ್ ಕ್ಯೂ ವೈರಸ್ ಕೂಡ ಸಾಕಷ್ಟು ಸಾವು-ನೋವು ತಂದೊಡ್ಡಲಿದೆ ಎಂದು ಐಸಿಎಂ ಆರ್ ನ ಮಹಾರಾಷ್ಟ್ರ ವಿಭಾಗದ ತಜ್ನರು ಎಚ್ಚರಿಸ್ಸಿದ್ದಾರೆ.
ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಈ ವೈರಸ್ ಪತ್ತೆ ಹಚ್ಚಿದೆ. ಚೀನಾ ಹಾಗೂ ವಿಯೇಟ್ನಾಮ್ ನಲ್ಲಿ ಈಗಾಗಲೇ ಹಂದಿಗಳಿಂದ ಈ ವೈರಸ್ ಹರಡುತ್ತಿದೆ. ದೇಶದಲ್ಲಿ 883 ಜನರನ್ನು ಸ್ಯಾಂಪಲ್ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ರಾಜ್ಯದ ಇಬ್ಬರು ವ್ಯಕ್ತಿಗಳಲ್ಲಿ ಈ ವೈರಸ್ ಪತ್ತೆಯಾಗಿತ್ತು ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ