Politics

*ಕುಕ್ಕರ್ ಬಾಂಬ್, ಪೊಲೀಸ್ ಠಾಣೆಗೆ ಬೆಂಕಿ ಹಾಕಿದರೆ ಸರ್ಕಾರ ಸುಮ್ಮನಿರುತ್ತೆ: ಬೆಲ್ಲದ್ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ : ಶಾಂತಿಯುತವಾಗಿ 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಸಾಲಿ ಸಮುದಾಯದವರು ಹೋರಾಟ ಮಾಡಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.‌

ಹುಬ್ಬಳ್ಳಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ, ದೊಂಬಿ ಕೋರರಿಗೆ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರಿಗೆ ಇದೇ ಕಾಂಗ್ರೆಸ್ ಮುತ್ತಿಡುತ್ತದೆ.

ಪೊಲೀಸ್ ಠಾಣೆಗೆ ಬೆಂಕಿ ಹಾಕುವವರು ಕಂಡರೆ ಸುಮ್ಮನಾಗುವ ಈ ಸರ್ಕಾರ, ರಕ್ತ ಬರುವಂತೆ ಥಳಿಸಿ ನಮ್ಮ ಹೋರಾಟವನ್ನು ಹತ್ತಿಕ್ಕಲು ಲಾಠಿ ಏಟು ಕೊಟ್ಟಿದೆ. ಯಾಕೆ ಈ ತಾರತಮ್ಯ? ಓಲೈಕೆ ರಾಜಕಾರಣ ಮಾಡೋದ್ಯಾಕೆ ಎಂದು ಬೆಲ್ಲದ್ ಕಿಡಿಕಾರಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಸಂವಿಧಾನ ವಿರೋಧಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸುಳ್ಳನ್ನು ಹೇಳುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸುತ್ತದೆ ಎಂಬ ವಿಶ್ವಾಸ, ಯಾವ ಗ್ಯಾರಂಟಿಯೂ ಇಲ್ಲ ಎಂದು ಕುಟುಕಿದ್ದಾರೆ.

Home add -Advt

Related Articles

Back to top button