Cancer Hospital 2
Beereshwara 36
LaxmiTai 5

*ಪುಸ್ತಕಗಳಿಗೆ ಸರ್ಕಾರದ ಪ್ರೋತ್ಸಾಹ ಹೆಚ್ಚಾದರೆ ಮೌಲ್ಯಯುತ ಸಾಹಿತ್ಯ ಕಡಿಮೆಯಾಗುತ್ತದೆ : ಬಸವರಾಜ ಬೊಮ್ಮಾಯಿ*

Anvekar 3

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪುಸ್ತಕಗಳಿಗೆ ಸರ್ಕಾರದ ಪ್ರೋತ್ಸಾಹ  ಹೆಚ್ಚಾದರೆ ಸಾಹಿತ್ಯದ ಮೌಲ್ಯ ಕಡಿಮೆಯಾಗುತ್ತದೆ. ಕಳಪೆ ಸಾಹಿತ್ಯ ಹೆಚ್ಚಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ವಿಶ್ವವಾಣಿ ಪುಸ್ತಕ ಹೊರ ತಂದಿರುವ ಆರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದು ಬಿಡುಗಡೆಯಾಗಿರುವ ಪುಸ್ತಕಗಳಲ್ಲಿ ಅರ್ಥಪೂರ್ಣವಾಗಿ ಬದುಕಿನ ಒಳ ಮರ್ಮ ಹೇಳುವ ಅಂಕಣಗಳು ಇದರಲ್ಲಿವೆ.

ವಿಶ್ವೇಶ್ವರ ಭಟ್ಟರು ಪ್ರತಿದಿನ ಹೊಸದನ್ನು ಹುಡುಕಿ ಜನರಿಗೆ ತಿಳಿಸುತ್ತಾರೆ. ಜನರಿಗೆ ಏನಾದರೂ ಹೇಳುವುದು ಬಹಳ ಕಷ್ಟ. ಅವರಲ್ಲಿ ಇರುವ ಚಿಂತನಾ ಶಕ್ತಿ ಸದಾ ಜೀವಂತ ಇರುವುದನ್ನು ನಾನು ಕಂಡಿದ್ದೇನೆ. ಅವರು ಒಬ್ಬ ಕೇವಲ ಪತ್ರಕರ್ತನಾಗಿ ಬೆಳೆದಿಲ್ಲ. ಒಬ್ಬ ಪತ್ರಕರ್ತ ಎಲ್ಲ ರಂಗದವರೊಂದಿಗೆ ಸಂಪರ್ಕ ಹೊಂದಿರದಿದ್ದರೆ, ಅವರು ಜನರ ಮನಸಿನಿಂದ ದೂರವಾಗುತ್ತಾನೆ ಎಂದರು.

ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧ ಇದೆ. ಪತ್ರಕರ್ತರಿಲ್ಲದೆ ರಾಜಕಾರಣ ಇಲ್ಲ. ರಾಜಕಾರಣಿಗಳಿಲ್ಲದೆ ಪತ್ರಿಕೋದ್ಯಮ‌ ಇಲ್ಲ. ಟೀಕೆ ಮಾಡಲಿಕ್ಕೆ ಆದರೂ ಪತ್ರಿಕೆಗಳಿಗೆ ರಾಜಕಾರಣಿಗಳು ಬೇಕು. ರಾಜಕಾರಣಿಗಳು ಭ್ರಮೆಯಲ್ಲಿರುತ್ತೇವೆ. ಆದರೆ ವಾಸ್ತವ ಹಾಗೆ ಇರುವುದಿಲ್ಲ‌ ಎಂದರು.

Emergency Service

ಮಾತನಾಡುವವರಿಗಿಂತ ಕೇಳುವವರು ಬುದ್ದಿವಂತರು, ಬರೆಯುವವರಿಗಿಂತ ಓದುವವರು ಬುದ್ದಿವಂತರು ಅಂತ ಅರ್ಥ ಮಾಡಿಕೊಳ್ಳಬೇಕು. ಪುಸ್ತಕ ಉದ್ಯಮ ಯಾವಾಗಲೂ ಸಂಕಷ್ಟದಲ್ಲಿ ಇರುತ್ತದೆ. ಓದುಗರು ಸಾಹಿತ್ಯವನ್ನು ಖರೀದಿ ಮಾಡಿ ಅದರ ಆದಾಯ ಲೇಖಕನಿಗೆ ಸಿಗುವವರೆಗೂ ಪುಸ್ತಕೋದ್ಯಮ ಸಂಕಷ್ಟದಲ್ಲಿಯೇ ಇರುತ್ತದೆ. ಆದರೆ, ಸರ್ಕಾರದಿಂದ ಸೂಕ್ತ ಪ್ರೋತ್ಸಾಹವೂ ಸಿಗಬೇಕು ಎಂದರು. 

 ನಮ್ಮ ಭವಿಷ್ಯ ಹೇಗಾದರೂ ರೂಪಿಸಬಹುದು, ಡಾಕ್ಟರ್, ಎಂಜನೀಯರ್, ಲಾಯರ್ ಆದರೂ ಮಾನವೀಯ ಗುಣಗಳು ಕಡೆಯಾಗುತ್ತಿವೆ. ಹೆಣ್ಣು ಮಕ್ಕಳ ಮೇಲೆ ಗೌರವ ಇಲ್ಲ‌. ಮಕ್ಕಳ‌ ಮೇಲೆ‌ ಕರುಣೆ ಇಲ್ಲ. ಎಲ್ಲೆಡೆ ದೌರ್ಜನ್ಯ ಅನ್ಯಾಯ ಹೆಚ್ಚಾಗುತ್ತಿದೆ. ನಾನು ಯಾವಾಗ ವಿಚಲಿತನಾಗುತ್ತೇನೊ ಆಗ ಭಗವದ್ವೀತೆ ಓದುತ್ತೇನೆ.‌ ಅದರಿಂದ ನನ್ನ ಮನಸಿಗೆ ಶಾಂತಿ ದೊರೆಯುತ್ತದೆ. ಭಗವದ್ವೀತೆ ಎಲ್ಲ ಕಾಲಕ್ಕೂ ಪರಿಹಾರ ಒದಗಿಸುವ ಕೃತಿಯಾಗಿದೆ. ಮನುಷ್ಯ ಎಲ್ಲ ಪ್ರಾಣಿಗಳಿಗಿಂತ ಶ್ರೇಷ್ಟ ಅಂತ ಹೇಳುತ್ತೇವೆ. ಅದಕ್ಕೆ ಕಾರಣ ಎಲ್ಲ ಪರಿಸ್ಥಿತಿಗೂ ಹೊಂದಿಕೊಳ್ಳುವ ಮನಸ್ಥಿತಿ ಮನುಷ್ಯನಿಗೆ ಇದೆ.

ನಮ್ಮ ಪರಿಸರ ನಿರಂತರ ಹಾಳಾಗುತ್ತಿದೆ. ಈ ಬಗ್ಗೆಯೂ ಸಾಕಷ್ಟು ಪುಸ್ತಕಗಳು ಬಂದಿವೆ. ಆದರೆ, ಪರಿಸರದ ನಾಶ ನಿಂತಿಲ್ಲ. ಅದಕ್ಕಾಗಿ ನಾನು ಇಕೊ ಬಜೆಟ್ ಮಾಡಿದ್ದೆ ಎಂದು ಹೇಳಿದರು. 

ಲೇಖನಿಯಲ್ಲಿ ರಾಜಕೀಯದ ಬಗ್ಗೆ ಬರೆಯಬೇಕು ಆದರೆ, ಬರವಣಿಯಲ್ಲಿ‌ ರಾಜಕಾರಣ ಮಾಡಬಾರದು.‌ ಹಾಗಾದರೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಪ್ರದೀಪ್ ಈಶ್ವರ್, ವಿಶ್ವವಾಣಿ ಪ್ರಧಾನ ಸಂಪಾದಕರು ಹಾಗೂ ಕೃತಿಕಾರರಾದ ವಿಶ್ವೇಶ್ವರ ಭಟ್, ಕಿರಣ ಉಪಾಧ್ಯಾಯ, ಶಿಶಿರ ಹೆಗಡೆ, ರೂಪಾ ಗುರುರಾಜ ಹಾಜರಿದ್ದರು.

Bottom Add3
Bottom Ad 2