ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾನುವಾರ ಬೆಳಗಾವಿಗೆ ದೊಡ್ಡ ಶಾಕ್ ಹೊಡೆದಿದೆ. 22 ಜನರಿಗೆ ಕೊರೋನಾ ಸೋಂಕು ತಗುಲುವ ಮೂಲಕ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೋಂಕು ತಗುಲಿರುವವರು ಪತ್ತೆಯಾಗಿದ್ದಾರೆ.
ಆದರೆ ನಮ್ಮ ಅಧಿಕಾರಿಗಳು ಸ್ವಲ್ಪ ಎಚ್ಚರ ತಪ್ಪಿದ್ದರೆ ಇದರ ಸಾವಿರ ಪಟ್ಟು ದೊಡ್ಡ ಅನಾಹುತ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗೆ ಕಾದಿತ್ತು. ಎರಡೂ ಜಿಲ್ಲೆಗಳು ರೆಡ್ ಝೋನ್ ಗೆ ಬೀಳುವುದಲ್ಲದೆ ಕೊರೋನಾ ಸೋಂಕಿನ ಪ್ರಮಾಣ ಎಷ್ಟೋಪಟ್ಟು ಹೆಚ್ಚಾಗುತ್ತಿತ್ತು. ಈ ಜಿಲ್ಲೆಗಳ ಎಲ್ಲಿ ನೋಡಿದರಲ್ಲಿ ಕಂಟೈನ್ಮಂಟ್ ಝೋನ್ ಕಾಣಸಿಗುತ್ತಿತ್ತು. ಆದರೆ ಅಧಿಕಾರಿಗಳು ಮಾಡಿದ ಉತ್ತಮ ಕೆಲಸದಿಂದಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಏನಾಗಿತ್ತು?
ಬೆಳಾಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಂದ 38 ಜನರು ಮಾರ್ಚ್ 17ರಂದು ಅಜ್ಮೀರ್ ಗೆ ತೆರಳಿದ್ದರು. ಅವರೆಲ್ಲ ಧಾರ್ಮಿಕ ಪ್ರವಾಸಕ್ಕೆಂದು ಹೋದವರು. ಆದರೆ ವಾಪಸ್ ಬರಬೇಕೆನ್ನುವಷ್ಟರಲ್ಲಿ ಲಾಕ್ ಡೌನ್ ಆರಭವಾಯಿತು. ಹಾಗಾಗಿ ಅವರೆಲ್ಲ ಅಜ್ಮೀರ್ ದರ್ಗಾದಲ್ಲೇ ಉಳಿದುಕೊಳ್ಳಬೇಕಾಯಿತು.
ಮಾಹಿತಿಯ ಪ್ರಕಾರ ಆ ಸಂದರ್ಭದಲ್ಲಿ ಅಜ್ಮೀರ್ ದರ್ಗಾಕ್ಕೆ ಬಂದಿದ್ದ ಪ್ರವಾಸಿಗರ ಸಂಖ್ಯೆ 4-5 ಸಾವಿರ. ಕರ್ನಾಟಕದಿಂದ ಹೊದವರು 4-5 ನೂರು. ಲಾಕ್ ಡೌನ್ ನಿಂದಾಗಿ ಅವರೆಲ್ಲ ಅಲ್ಲೇ ಲಾಕ್ ಆದರು.
ಸುಮಾರು 40 ದಿನ ಅಜ್ಮೀರ್ ದರ್ಗಾದಲ್ಲಿದ್ದ ಬೆಳಗಾವಿ, ಬಾಗಲಕೋಟೆಯಿಂದ ಹೊದವರು ಇನ್ನೂ ಅಲ್ಲೇ ಉಳಿಯಲಾಗದೆ ಅಜ್ಮೀರ್ ಜಿಲ್ಲಾಧಿಕಾರಿಗಳಿಂದ ಪಾಸ್ ಪಡೆದು ಬೆಳಗಾವಿ ಕಡೆ ಹೊರಟರು. ಹಾಗೆ ಬರುವಾಗ ತಾವು ವ್ಯೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದೆವು ಎಂದು ಅವರು ಹೇಳುತ್ತಾರೆ. ಆದರೆ ಅವರ ಬಳಿ ಇದ್ದುದು ನಕಲಿ ಪರೀಕ್ಷೆ ಪತ್ರ ಎನ್ನುವ ಆರೋಪವೂ ಇದೆ.
ಇನ್ ಸ್ಟಿಟ್ಯೂಶನಲ್ ಕ್ವಾರಂಟೈನ್
ಖಾಸಗಿ ಬಸ್ ಮಾಡಿಕೊಂಡು 4 ರಾಜ್ಯ ದಾಟಿ ಅವರು ಬರುತ್ತಿದ್ದರು. ಆದರೆ ನಿಪ್ಪಾಣಿ ಬಳಿ ಬರುತ್ತಿದ್ದಂತೆ ನಮ್ಮ ಅಧಿಕಾರಿಗಳು ಅವರನ್ನೆಲ್ಲ ತಡೆದು ವಾಪಸ್ ಕಳಿಸಿದ್ದಾರೆ. ಸ್ವಲ್ಪ ದೂರ ವಾಪಸ್ ಹೊದವರು ಪುನಃ ಅಡ್ಡ ದಾರಿ ಹಿಡಿದು ಸಣ್ಣ ಚಕ್ಕಡಿ ರಸ್ತೆಯ ಮೂಲಕ ಬೆಳಗಾವಿ ಗಡಿಯೊಳಗೆ ನುಸುಳಿದ್ದಾರೆ.
ಆದರೂ ಕೇವಲ 4-5 ಕಿಮೀ ಬರುವಷ್ಟರಲ್ಲೆ ಮತ್ತೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದಾರೆ. ಅವರನ್ನೆಲ್ಲ ವಶಕ್ಕೆ ಪಡೆದ ಅಧಿಕಾರಿಗಳು ನಿಪ್ಪಾಣಿ ಬಳಿ ಮೊರಾರ್ಜಿ ದೇಸಾಯಿ ಸ್ಕೂಲ್ ನಲ್ಲಿ ಇನ್ ಸ್ಟಿಟ್ಯೂಶನಲ್ ಕ್ವಾರಂಟೈನ್ ಮಾಡಿದ್ದಾರೆ.
ಮೇ 3ರಂದು ಬಂದ ಅವರೆಲ್ಲರ ಗಂಟಲು ದ್ರವ ಪಡೆದು ಮೇ 7ರಂದು ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು, ಬೆಳಗಾವಿಯ 22, ಬಾಗಲಕೋಟೆಯ 8 ಜವರಲ್ಲಿ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇನ್ನುಳಿದ 8 ಜನರ ವರದಿ ನೆಗೆಟಿವ್ ಬಂದಿದ್ದರೂ ಅವರನ್ನು ಕ್ವಾರಂಟೈನ್ ನಲ್ಲಿ ಮುಂದುವರಿಸಲಾಗಿದೆ.
ಯಾವ ಯಾವ ಊರಿಗೆ ಕಂಠಕವಾಗುತ್ತಿತ್ತು?
ಒಂದು ವೇಳೆ ಅಧಿಕಾರಿಗಳು ಅವರನ್ನು ಹಿಡಿದು ಕ್ವಾರಂಟೈನ್ ಮಾಡಿರದಿದ್ದರೆ ಬೆಳಗಾವಿ ಮತ್ತು ಬಾಗಲಕೋಟೆಯ ಪರಿಸ್ಥಿತಿ ಘನಘೋರವಾಗುತ್ತಿತ್ತು.
ಬೆಳಗಾವಿಯ ಇಬ್ಬರು, ಸಂಕೇಶ್ವರದ 7 ಜನರು, ನಿಪ್ಪಾಣಿಯ ಮೂವರು, ಹುಕ್ಕೇರಿ ತಾಲೂಕು ಗೋಟೂರಿನ 4, ಹುಕ್ಕರಿಯ 5, ಕಾಗವಾಡದ 4, ರಾಯಬಾಗದ 3, ಮೂಡಲಗಿ ತಾಲೂಕು ಗುರ್ಲಾಪುರದ ಇಬ್ಬರು ಹಾಗೂ ಬಾಗಲಕೋಟೆ ಜಿಲ್ಲೆಯ 9 ಜನರು ಈ 38 ಜನರ ತಂಡದಲ್ಲಿದ್ದರು.
ಆಘಾತಕಾರಿ ಸಂಗತಿ ಎಂದರೆ ಈ ತಂಡದಲ್ಲಿ 15 ವರ್ಷದೊಳಗಿನ 8 ಜನ ಹೆಣ್ಣು ಮಕ್ಕಳು ಹಾಗೂ 6 ಗಂಡು ಮಕ್ಕಳಿದ್ದಾರೆ. ಇವರನ್ನು ಹೊರತುಪಡಿಸಿ 12 ಮಹಿಳೆಯರಿದ್ದರು. ಇತರ 12 ಜನರು ವಿವಿಧ ವಯೋಮಾನದ ಗಂಡಸರು.
ಅವರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಬಿಟ್ಟಿದ್ದರೆ ಈ ಎಲ್ಲ ಊರುಗಳೂ ಇಂದು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತನೆಯಾಗುತ್ತಿತ್ತು. ಅವರು ಬೆಳಗಾವಿ ಜಿಲ್ಲೆಯಲ್ಲಿ ಯಾರನ್ನೂ ಸಂಪರ್ಕಿಸಲು ಅವಕಾಶ ನೀಡದಿರುವುದರಿಂದ ಜಿಲ್ಲೆ ಅಷ್ಟರಮಟ್ಟಿಗೆ ಸಂಕಷ್ಟದಿಂದ ಪಾರಾಗಿದೆ.
ಹ್ಯಾಟ್ಸ್ ಆಫ್ ನಮ್ಮ ಅಧಿಕಾರಿಗಳಿಗೆ.
ಇದೇ ವೇಳೆ, ಕಳ್ಳ ಮಾರ್ಗದಿಂದ ನುಸುಳಲು ಯತ್ನಿಸಿದ್ದ ಎಲ್ಲರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಗಂಭೀರ ಪ್ರಕರಣ ದಾಖಲಿಸಬೇಕು. ಕಾನೂನಿನ ಪ್ರಕಾರ ಕೊಲೆ ಯತ್ನ ಪ್ರಕರಣ ದಾಖಲಿಸುವುದಕ್ಕೂ ಅವಕಾಶವಿದೆ. ಅವರು ಹೊಂದಿದ್ದ ವೈದ್ಯಕೀಯ ಪ್ರಮಾಣ ಪತ್ರ ನಕಲಿಯಾಗಿದ್ದರೆ ಅದರ ಮೇಲೂ ಪ್ರಕರಣ ದಖಲಿಸಬೇಕು.
ಒಟ್ಟಾರೆ ನಿಜಾಮುದ್ದೀನ್ ರಾಡಿಯ ಮಧ್ಯೆ ಮತ್ತೊಂದು ಅಜ್ಮೀರ್ ರಾಡಿ ಬೆಳಗಾವಿ ಜಿಲ್ಲೆಗೆ ಅಂಟಿಕೊಂಡಂತಾಗಿದೆ. ಇದು ಯಾವಾಗ ಮುಗಿಯುತ್ತೋ ಎಂದು ಜನರು ಕಾಯುವಂತಾಗಿದೆ.
ರಾಜ್ಯದಲ್ಲಿ ಇಂದು ಒಂದೇ ದಿನ 54 ಜನರಿಗೆ ಕೊರೊನಾ ಸೋಂಕು ದೃಢ
ಬೆಳಗಾವಿಯಲ್ಲಿ 22 ಸೇರಿ ರಾಜ್ಯದಲ್ಲಿ 53 ಜನರಿಗೆ ಕೊರೋನಾ ಸೋಂಕು
After Nijamuddin, Azmeer in Rajasthan May Push Country in Corona Well
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ