
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ತಾಲೂಕಿನ ನರಸಿಂಗಪುರ ಗ್ರಾಮದಲ್ಲಿ ಅನೈತಿಕ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಓರ್ವ ವ್ಯಕ್ತಿಯನ್ನು ಕೊಲೆಮಾಡಲಾಗಿದೆ.
ಭೀರಪ್ಪಾ ವಿಠಲ ಕಮತಿ (೨೭) ಎಂಬಾತನನ್ನು ಅದೆ ಗ್ರಾಮದವರಾದ ಭೀರಪ್ಪಾ ದುಂಡಪ್ಪಾ ಬಡಾಯಿ ಹಾಗೂ ಸತ್ತೆಪ್ಪಾ ಸಿದ್ದಪ್ಪಾ ಬಡಾಯಿ ಇವರಿಬ್ಬರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕೆ ವ್ಯಕ್ತಪಡಿಸಿ ಭೀರಪ್ಪಾ ವಿಠಲ ಕಮತಿಯನ್ನು ಬೆನ್ನಟ್ಟಿ ಆಯುಧಗಳಿಂದ ಕೊಚ್ಚಿ ಕೊಲೆಮಾಡಿದ್ದಾರೆ. ಈ ಕುರಿತು ಭೀಮರಾಮ ಪುಂಡಲಿಕ ಹೆಗ್ರೆ ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆಂದು ಸಿಪಿಐ ಗುರುರಾಜ ಕಲ್ಯಾಣ ಶೆಟ್ಟಿ ತಿಳಿಸಿದ್ದಾರೆ,
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ