Kannada NewsKarnataka News

ಪ್ರಮುಖ ಸಂಕ್ಷಿಪ್ತ ಸುದ್ದಿಗಳು

 

 ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ: ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಾರೂಗೇರಿ ಪುರಸಭೆಯಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ(ಹಂತ-೪) ರಡಿ(ಅ) ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬದ ಮನೆಗಳಿಗೆ ಸೋಲಾರ ದೀಪ ಹಾಗೂ (ಬ) ಸಾಮಾನ್ಯ ಬಡ ಕುಟುಂಬಗಳಿಗೆ ಸೋಲಾರ ದೀಪ ಪೂರೈಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅದೇ ರೀತಿಯಲ್ಲಿ ವಿಕಲಚೇತನರಿಗೆ ತ್ರಿಚಕ್ರ ವಾಹನ ಹಾಗೂ ವಿವಿಧ ವಸತಿಯೋಜನೆಯಡಿ ಆಯ್ಕೆಯಾಗುವ ವಸತಿಯೋಜನೆಯ ಫಲಾನುಭವಿಗಳಿಗೆ ವಂತಿಗೆ ಪಾವತಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವ ಡಿಸೆಂಬರ್ ೧೫ ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ ೦೮೩೩೧-೨೫೭೦೪೧, ಮೇಲ್‌ಐಡಿ [email protected] ಇಲ್ಲಿಗೆ ಅಥವಾ ಪುರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಎಂದು ಹಾರೂಗೇರಿ ಪುರಸಭೆ ಮುಖ್ಯಾಧಿಕಾರಿ ಜಿ. ವ್ಹಿ. ಹಣ ಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ: ನೇಕಾರರ ಸಾಲಕ್ಕೆ ಬಡ್ಡಿ ಸಹಾಯಧನ

ಕೈಮಗ್ಗ ಮತ್ತು ಜವಳಿ ಇಲಾಖೆ, ವತಿಯಿಂದ ೨೦೨೨-೨೩ನೇ ಸಾಲಿನ ಆಯವ್ಯಯದಲ್ಲಿ ನೇಕಾರಿಕೆ ಉದ್ದೇಶಕ್ಕಾಗಿ ಎದುರಿಸುತ್ತಿರುವ ಬಂಡವಾಳ ಕೊರತೆಯನ್ನು ನೀಗಿಸಲು ರಾಜ್ಯದ ನೇಕಾರರ ಸಹಕಾರ ಸಂಘಗಳು/ಪ್ರಾಥಮಿಕ ಕೃಷಿ ಪತ್ತಿನ ಸಂಘ/ಪತ್ತಿನ ಸಹಕಾರ ಸಂಘ/ಕೃಷಿಯೇತರ ಪತ್ತಿನ ಸಹಕಾರ ಸಂಘ/ಸಹಕಾರ ಬ್ಯಾಂಕ್ (ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಗಳು, ಪಟ್ಟಣ ಸಹಕಾರ ಬ್ಯಾಂಕ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಹಾಗೂ ಇತರೆ ಕೈಗಾರಿಕಾ ಸಹಕಾರ ಬ್ಯಾಂಕಗಳು) ಹಣಕಾಸಿನ ಸಂಸ್ಥೆಗಳು ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಪಡೆಯುವ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಫಾವಧಿ ಸಾಲದ ಮೇಲೆ ಶೇ. ೮ ರಷ್ಟು ಬಡ್ಡಿ ಸಹಾಯಧನವನ್ನು ರಾಜ್ಯ ಸರ್ಕಾರದಿಂದ ನೀಡುವ ಹೊಸ ಯೋಜನೆಯನ್ನು ಘೋಷಿಸಲಾಗಿರುತ್ತದೆ.

ಆದ ಕಾರಣ ಕರ್ನಾಟಕ ರಾಜ್ಯದ ರಹವಾಸಿಗಳಾದ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ ಅರ್ಹ ಫಲಾನುಭವಿಗಳು ಈ ಕಛೇರಿಯಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ.

ನಂತರ ಈ ಕಚೇರಿಯಿಂದ ಸ್ಥಳ ಪರಿಶೀಲನೆ ಜರುಗಿಸಿ ನೇಕಾರಿಕೆ ಉದ್ಯೋಗ ಮಾಡುತ್ತೀರುವ ಬಗ್ಗೆ ಖಾತರಿಸಿ ಪಡಿಸಿಕೊಂಡು ತಾವು ಸಾಲ ಪಡೆಯಲು ಇಚ್ಛೆಯನ್ನು ಹೊಂದಿರುವ ಸಹಕಾರ ಸಂಘ/ಬ್ಯಾಂಕು/ಹಣಕಾಸು ಸಂಸ್ಥೆ ಮತ್ತು ವಾಣ ಜ್ಯ ಬ್ಯಾಂಕುಗಳಿಗೆ ಅರ್ಜಿದಾರರ ಸಾಲದ ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಆರ್‌ಸೆಟಿ ಸಲಹಾ ಸಮಿತಿ ಸಭೆ

ಜಿಲ್ಲಾ ಮಟ್ಟದ ಆರ್‌ಸೆಟಿ ಸಲಹಾ ಸಮಿತಿಯ ಸಭೆ ನವಂಬರ್ ೩೦ ರಂದು ಸಂಸ್ಥೆಯಲ್ಲಿ ಹಮ್ಮಿಕೊಳಲಾಯಿತು. ಈ ಸಭೆಯ ಚೆರಮನ್‌ರಾದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ ಎಚ್. ವಿ., ಇವರು ಸಭೆಯಲ್ಲಿ ಆರಸೆಟಿಯ ಎಲ್ಲ ಕಾರ್ಯಚಟುವಟಿಕೆಯನ್ನು ವೀಕ್ಷಿಸಿ, ಜೊತೆಗೆ ಮಂದಿನ ವರ್ಷದ ತರಬೇತಿಯ ಪಟ್ಟಿಯನ್ನು ಪರಿಶೀಲಿಸಿ ಮನ್ನಣೆ ನೀಡಿದರು.

ಸಂಸ್ಥೆಯಲ್ಲಿ ಈಗಾಗಲೇ ನಡೆದಿರುವ ತರಬೇತಿಗಳಾದ ಬ್ಯೂಟಿ ಪಾರ್ಲರ ಮ್ಯಾನೇಜಮೆಂಟ್ ಮತ್ತು ಬ್ಯಾಂಕಮಿತ್ರ ತರಬೇತಿಯ ಶಿಭಿರಾರ್ಥಿಗಳೊಂದಿಗೆ ಮಾತನಾಡಿ ತರಬೇತಿಯ ಅನಿಸಿಕೆಗಳನ್ನು ಆಲಿಸಿದರು. ಅದಾದ ನಂತರ ತರಬೇತಿಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವಿರಿ, ಇದೇ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸಿರಿ ಎಂದು ಸಂಸ್ಥೆಯ ನಿರ್ದೇಶಕರು ಮತ್ತು ಎಲ್ಲ ಸಿಬಂದ್ದಿಯವರನ್ನು ಅಭಿನಂದಿಸಿದರು.
ಸದರಿ ಸಲಹಾ ಸಮಿತಿಯ ಇನ್ನಿತರ ಸದಸ್ಯರು ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ ಯೋಜನಾಧಿಕಾರಿ ಆರ್.ಎನ್. ಬಂಗಾರೆಪ್ಪನವರ, ಬೆಳಗಾವಿ ಕೆನರಾ ಬ್ಯಾಂಕ ಪ್ರಾದೇಶಿಕ ಕಚೇರಿಯ ಗ್ಯಾಪ್ತಿ ಜೈನ್ ಹಿರಿಯ ವ್ಯವಸ್ಥಾಪಕ ಸಂಜೀವಕುಮಾರ ವಂಜೇರಿ, ಕೆನರಾ ಬ್ಯಾಂಕ ಪ್ರಮುಖ ಬ್ಯಾಂಕ ಅಧಿಕಾರಿ ಎ. ಐ. ಪಟ್ಟಾಣ, ಬೆಳಗಾವಿ ಜಿಲ್ಲಾ ಕೈಗಾರಿಕಾ ಸಮಿತಿ ಉಪ ನಿರ್ದೇಶಕ ಎಮ್. ರಂಗಪ್ಪಾ, ಬೆಳಗಾವಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ಸಹ ಸಂಸ್ಥೆಯ ಕಾರ್ಯವೈಖರಿಯನ್ನು ಅವಲೋಕಿಸಿ, ಉತ್ತಮ ರೀತಿಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸತಿ-ಪತಿಯನ್ನು ಒಂದು ಮಾಡಿದ ಚಿಕ್ಕೋಡಿ ನ್ಯಾಯಾಲಯ

https://pragati.taskdun.com/husband-wifenegotiationchikkodi-court/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button