Kannada NewsKarnataka NewsLatest

ಮಾಹಿತಿ ಆಯೋಗದ ಬೆಳಗಾವಿ ಪೀಠ ಆರಂಭ ಮತ್ತಿತರ ವಿವಿಧ ಪ್ರಮುಖ ಸುದ್ದಿಗಳು

ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠ ಆರಂಭ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಮಾಹಿತಿ ಆಯೋಗ ಬೆಳಗಾವಿ ಪೀಠವು ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರ, ೧ ನೇ ಮಹಡಿ ಕೊಠಡಿ ಸಂಖ್ಯೆ ೧೪೧ ರಲ್ಲಿ ಕಾರ್ಯಾರಂಭಿಸಿದೆ. ಈ ಈ ಹಿನ್ನೆಲೆಯಲ್ಲಿ ಶುಕ್ರವಾರ (ಜೂ.೧೯) ಮಧ್ಯಾಹ್ನ ೧೨.೩೦ ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ಗೀತಾ ಬಿ.ವಿ. ಅವರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಮಾಸ್ಕ್ ಬಳಕೆಯ ಜನಜಾಗೃತಿಗೆ ಮಾಸ್ಕ್ ದಿನಾಚರಣೆ

ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದ ಪಾರಾಗಲು ಮುಖಕ್ಕೆ ಮಾಸ್ಕ್ ಧರಿಸುವುದು; ಸೋಪಿನಿಂದ ಕೈ ತೊಳೆಯುವುದು , ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ೧೮ ನೇ ಜೂನ್ ಅನ್ನು ಮಾಸ್ಕ್ ದಿನವನ್ನಾಗಿ ಘೋಷಿಸಿರುವುದರಿಂದ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ಗುರುವಾರ (ಜೂ.೧೮) ಮಾಸ್ಕ್ ದಿನವನ್ನು ಆಚರಿಸಲಾಯಿತು.
ನಗರದ ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಜಾಗೃತಿ ಜಾಥಾ ಕೈಗೊಳ್ಳುವದರ ಮೂಲಕ ಮಾಸ್ಕ್ ಧರಿಸುವುದರ ಅವಶ್ಯಕತೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು.

ಜನರಿಗೆ ಹೂ ನೀಡಿ ಜಾಗೃತಿ :
ಜಾಗೃತಿ ವೇಳೆ ಅಧಿಕಾರಿಗಳು ಬೈಕ್ ಸವಾರರಿಗೆ ಹೂ ನೀಡುವ ಮೂಲಕ ಮಾಸ್ಕ್ ಧರಿಸುವುದರ ಬಗ್ಗೆ ಜಾಗೃತಿ ಮೂಡಿಸಿದರು. ಇದೇ ವೇಳೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ಜನ ಜಾಗೃತಿ ಮೂಡಿಸಿದರು.
ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಗ್ಗೆ ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು, ಬರುವ ದಿನಗಳಲ್ಲಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಆದ್ದರಿಂದ ಕೋವಿಡ್-೧೯ ರೋಗದಿಂದ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಜನರಿಗೆ ಜಾಗೃತಿ ಮೂಡಿಸಲು ಮಾಸ್ಕ್ ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಯಾರಾದರು ಮಾಸ್ಕ್ ಧರಿಸದೆ ಓಡಾಟ ನಡೆಸಿದರೆ ಅಂತವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ. ಮಾಸ್ಕ್ ಧರಿಸದೇ ಇರುವರ ಮೇಲೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿದೆ. ಅದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯೂ ಜಿಲ್ಲಾಡಳಿತ ಹಾಗೂ ಸರ್ಕಾರದ ಮಾರ್ಗದರ್ಶನವನ್ನು ಪಾಲನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಮಾಸ್ಕ್ ದಿನಾಚರಣೆಯ ಜಾಗೃತಿ ಜಾಥಾದಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಬಿ.ಎನ್. ಲೋಕೇಶ್ ಕುಮಾರ್, ಕೋವಿಡ್-೧೯ ವಿಶೇಷ ಅಧಿಕಾರಿ ರಾಜೇಂದ್ರ ಚೋಳನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ ಸಿಇಒ ಡಾ. ರಾಜೇಂದ್ರ ಕೆ.ವಿ. ಮತ್ತಿತರರು ಭಾಗವಹಿಸಿದ್ದರು.

ಕಾರ್ಮಿಕರಿಗೆ ಪರಿಹಾರಧನ

ಕೋವಿಡ್-೧೯ ಹಿನ್ನೆಲೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ಘಟಕಗಳ ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಒಂದು ಬಾರಿಗೆ ಅನ್ವಯಿಸುವಂತೆ ರೂ.೨,೦೦೦ ಪರಿಹಾರಧನವನ್ನು ನೇರವಾಗಿ ಕಾರ್ಮಿಕರ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿಗಳನ್ನು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ನಿಗಧಿಪಡಿಸಿದ ಸ್ಥಳಗಳಲ್ಲಿ ಅಥವಾ ಈ ಕಚೇರಿಯಿಂದ ಅರ್ಜಿ ಪಡೆದು ಮಾಹಿತಿ ಭರ್ತಿ ಮಾಡಿ ದಾಖಲಾತಿಗಳನ್ನು ಲಗತ್ತಿಸಿ ಸಲ್ಲಿಸಬೇಕು.
ಮಾಲೀಕರಿಂದ ಕೂಲಿ ನೇಕಾರರ ಮಾಹಿತಿಯ ಕುರಿತು ರೂ.೨೦ ರ ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪತ್ರ., ಕೂಲಿ ಕಾರ್ಮಿಕರ ಆಧಾರ್ ಕಾರ್ಡ ಪ್ರತಿ, ಆಧಾರ್ ಮಾಹಿತಿಯನ್ನು ಆಃಖಿ ಗಾಗಿ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರಗಳು, ವಿದ್ಯುತ್ ಮಗ್ಗ ಘಟಕದ ಮುಂದೆ ಮಾಲೀಕರು ಹಾಗೂ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಗಳ ಗುಂಪಿನ ಫೋಟೋ, ಘಟಕವು ಬಾಡಿಗೆ/ಲೀಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ದಾಖಲಾತಿ, ಘಟಕದ ವಿದ್ಯುತ್ ಸಂಪರ್ಕ ಹೊಂದಿರುವ ಇತ್ತೀಚಿನ ಆರ್.ಆರ್.ನಂ.ನ ವಿದ್ಯುತ್ ಬಿಲ್ ಪ್ರತಿ ಹಾಗೂ ಘಟಕದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ (ಲಭ್ಯವಿದ್ದಲ್ಲಿ) ಅರ್ಜಿಯ ಜೊತೆ ಸಲ್ಲಿಸಬೇಕು.
ಬೆಳಗಾವಿ ನಗರ ವ್ಯಾಪ್ತಿಯ ಘಟಕಗಳ ಮಾಲೀಕರು ದಾಖಲಾತಿಗಳನ್ನು ಜೈಲ್ ಶಾಲೆ, ವಡಗಾವಿ, ಬೆಳಗಾವಿ ಇಲ್ಲಿ ಸಲ್ಲಿಸಬಹುದಾಗಿದೆ. ಜಿಲ್ಲೆಯ ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ರಾಮದುರ್ಗ, ಸವದತ್ತಿ, ರಾಯಭಾಗ, ಕಿತ್ತೂರು, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ವ್ಯಾಪ್ತಿಯ ವಿದ್ಯುತ್ ಮಗ್ಗ ಮಾಲೀಕರು ಇಲಾಖೆಯಿಂದ ನಿಗಧಿಪಡಿಸಿದ ಸ್ಥಳೀಯ ನೇಕಾರ ಸಹಕಾರ ಸಂಘಗಳಿಂದ ಅಥವಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಮುಚ್ಚಳಿಕೆ ಪತ್ರ ನಮೂನೆಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಈ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:೦೮೩೧-೨೯೫೦೬೭೪ ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಯಿಂದಲೇ ಯೋಗ ಮಾಡಲು ಪ್ರಧಾನಿ ಕರೆ

ಪ್ರತಿ ವರ್ಷ ಜೂನ್ ೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು, ಆದರೆ ಕೋವಿಡ್-೧೯ ಹಿನ್ನೆಲೆಯಲ್ಲಿ ಈ ಬಾರಿಯ ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮವನ್ನು ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಸೂಚನೆಯಂತೆ ಙಔಉಂ ಈಖಔಒ ಊಔಒಇ ಎಂಬ ಘೋಷ ವಾಕ್ಯದೊಂದಿಗೆ ಜೂನ್ ೨೧ ರಂದು ಮುಂಜಾನೆ ೬.೧೫ ಘಂಟೆಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಉದ್ಘಾಟಿಸಿ ವಿಡಿಯೋ ರಿಕಾರ್ಡ ಮೂಲಕ ಯೋಗದ ಸಂದೇಶ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಬೆಳಿಗ್ಗೆ ೭.೦೦ ಘಂಟೆಗೆ ಯೋಗ ಪ್ರಾತ್ಯಕ್ಷಿಕೆಯ ನೇರ ಪ್ರಸಾರವನ್ನು ಬಿತ್ತರಿಸಲಿದ್ದು ಸಾರ್ವಜನಿಕರು ಹಾಗೂ ಯೋಗಾಸಕ್ತರು ಮನೆಯಿಂದಲೇ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಲಾಗಿದೆ.
ಕಾರ್ಯಕ್ರಮದ ಪ್ರಸಾರವನ್ನು ಪ್ರಸಾರ ಭಾರತಿ ದೂರದರ್ಶನದ ವತಿಯಿಂದ ಡಿ.ಡಿ ನ್ಯಾಷನಲ್, ಡಿ.ಡಿ ನ್ಯೂಸ್, ಡಿ.ಡಿ. ಭಾರತಿ, ಡಿ.ಡಿ. ಇಂಡಿಯಾ, ಡಿ.ಡಿ. ಉರ್ದು, ಡಿ.ಡಿ ಸ್ಪೋರ್ಟ್ಸ, ಡಿ.ಡಿ. ಕಿಸಾನ್ ಮತ್ತು ಎಲ್ಲ ಆರ್.ಎಲ್.ಎಲ್.ಎಸ್ ಚಾನಲ್‌ಗಳಲ್ಲಿ ಯೋಗ ಪ್ರಾತ್ಯಕ್ಷಿಕೆಯ ನೇರ ಪ್ರಸಾರವನ್ನು ಬಿತ್ತರಿಸಲಾಗುತ್ತಿದೆ.
ಸಾರ್ವಜನಿಕರು ಮತ್ತು ಯೋಗ ಆಸ್ತಕರು ಯೋಗಾಸನಗಳನ್ನು ಮಾಡಿದ ಪೋಟೊ ಪ್ರತಿ ಮತ್ತು ವಿಡಿಯೋ ಕ್ಲೀಪ್‌ಗಳನ್ನು ವೇಬ್‌ಸೈಟ (hಣಣಠಿs://ಜಿoಡಿms.gಟe/ಏರಿ೭oಂರಿbeರಿSಚಿsvಆPಐಂ) ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.
ಯೋಗ ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲ ಸರ್ಕಾರಿ ಇಲಾಖೆ, ಖಾಸಗಿ ವೈದ್ಯ ಸಂಘದವರು, ಆಯುಷ್ ಪೆಡರೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಯೋಗ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಗೆ/ಯೋಗಾಸಕ್ತರಿಗೆ ಮನೆಯಿಂದಲೇ ಯೋಗವನ್ನು ಆಚರಿಸುವಂತೆ ಹಾಗೂ ಎಲ್ಲರು ಕೋವಿಡ್-೧೯ ನಂತಹ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ

 

ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಜೂನ್ ೨೫ ರಿಂದ ಜುಲೈ ೪ ರವರೆಗೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ವಿಧ್ಯಾರ್ಥಿಗಳಿಗೆ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

ಜಿಲ್ಲಾ ನೋಡಲ್ ಅಧಿಕಾರಿಗಳು:
ಬೆಳಗಾವಿ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿಗಳಾದ ಎಮ್.ಜಿ ಬೆಳ್ಳನವರ್ ಅವರ ಮೊಬೈಲ್ ಸಂಖ್ಯೆ ೯೮೮೦೨೬೪೭೧೬, ಹಾಗೂ ವಿಷೆಯ ಪರಿವೀಕ್ಷಕರ ಹಾಗೂ ಸಹಾಯಕ ನೋಡಲ್ ಉಪನಿರ್ದೇಶಕರ ಕಚೇರಿಯ ಅಧಿಕಾರಿಗಳಾದ ಮೃಣಾಲಿನಿ ಪಾಟೀಲ್ ಅವರ ಮೊಬೈಲ್ ಸಂಖ್ಯೆ ೯೪೪೯೦೮೮೧೭೪ಗೆ ಕರೆ ಮಾಡಬಹುದು.

ತಾಲೂಕಾ ನೋಡಲ್ ಅಧಿಕಾರಿಗಳು:
ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪ್ರಕಾಶ ಮಾಸ್ತಿಹೊಳಿ ಮೊಬೈಲ್ ಸಂಖ್ಯೆ ೯೭೪೧೩೯೫೧೬೨, ಕಿತ್ತೂರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಗಂಗವ್ವ ಗಡಲಿಂಗನ್ನವರ್ ಮೊಬೈಲ್ ಸಂಖ್ಯೆ ೮೬೬೦೬೯೮೪೧೯, ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪರವಿನ್ ನದಾಫ್ ಮೊಬೈಲ್ ಸಂಖ್ಯೆ ೮೧೦೫೪೦೮೭೮೬, ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವಿನೋದಕುಮಾರಿ ಮೊಬೈಲ್ ಸಂಖ್ಯೆ ೯೪೪೮೧೧೦೭೭೧, ಖಾನಾಪೂರ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿಯ ಮಲ್ಲಿಕಾರ್ಜುನ ಬಿರ್ಜೆ ಮೊಬೈಲ್ ಸಂಖ್ಯೆ ೭೩೩೮೦೫೯೩೦೧, ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಗಂಗವ್ವ ಗಡಲಿಂಗನ್ನವರ್ ಮೊಬೈಲ್ ಸಂಖ್ಯೆ ೮೬೬೦೬೯೮೪೧೯, ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಗೋಪಾಲ್ ಎಮ್. ಹುಲ್ಲುರ ಮೊಬೈಲ್ ಸಂಖ್ಯೆ ೮೨೭೭೧೮೪೯೩೦ ಹಾಗೂ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮಂಜುನಾಥ ಹುದ್ದಾರ ಮೊಬೈಲ್ ಸಂಖ್ಯೆ ೯೪೮೧೦೦೬೪೫೩ ಸಹಾಯವಾಣಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಜನಾ ಪಾಟೀಲ್ ಅವರಿಗೆ ಪಿಎಚ್‌ಡಿ

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಶ್ತ್ರ ವಿಭಾಗದ ನಿವೃತ ಪ್ರಾಧ್ಯಾಪಕರಾದ ಡಾ. ಎಂ.ಎಸ್ ಆದಿ ಅವರ ಮಾರ್ಗದರ್ಶನದಲ್ಲಿ ಆನ್ ಎಕೊನೊಮಿಕ್ ಎನಾಲಿಸಿಸ್ ಆಫ್ ಹೈಯರ್ ಎಜ್ಯುಕೇಶನ್ ಇನ್ ರುರಲ್ ಏರಿಯಾಸ್; ಎ ಕೇಸ್ ಸ್ಟಡಿ ಇನ್ ಬೆಳಗಾವಿ ಡಿಸ್ಟ್ರಿಕ್ ಎಂಬ ವಿಷಯಕ್ಕೆ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ರಂಜನಾ ಪಾಟೀಲ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ ಪ್ರಧಾನ ಮಾಡಿದೆ.

ಜೂನ್ ೨೦ ರಂದು ವಿದ್ಯುತ್ ನಿಲುಗಡೆ

ಸ್ಮಾರ್ಟಸಿಟಿ ಕೆಲಸ ಕೈಗೊಳ್ಳುವ ಸಲುವಾಗಿ ಜೂನ್ ೨೦ ರಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬. ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
೩೩ ಕೆ.ವ್ಹಿ. ಆರ್ ಎಮ್-೨ ವಿದ್ಯುತ್ ವಿತರಣಾಕೇಂದ್ರದಿಂದ ಹೊರಡುವ ಎಫ-೬ ಟಿಳಕವಾಡಿಪೂರಕದ ಮೇಲೆ ಬರುವ ಪ್ರದೇಶಗಳಾದ ಮಾರಾಠ ಕಾಲನಿ, ಎಸ್.ವ್ಹಿ ಕಾಲನಿ, ಎಮ್.ಜಿ.ಕಾಲನಿ, ೧ನೇ ಗೇಟ್, ಲೀಲೆ ಗ್ರೌಂಡ, ಮಹರ್ಷಿರೋಡ್, ನೆಹರುರೋಡ, ಸಾವರಕರ್‌ರೋಡ, ರಾಯ್‌ರೋಡ, ವ್ಯಾಕ್ಷನ್‌ಡಿಪೊಗ್ರೌಂಡ, ರಾನಡೆರೋಡ, ಅಗರಕರರೋಡ, ೨ನೇ ಗೇಟ, ಪವಾರ್ ಚಾಳ್, ರಾಣಾಪ್ರತಾಪರೋಡ, ಹಿಂದು ನಗರಗಳಿಗೆ ವಿದ್ಯುತ್ ನಿಲುಗಡೆ ಆಗಲಿದೆ ಎಂದು ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button