ಬಸವಾದಿ ಶರಣರ ತತ್ವಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆಯಿದೆ- ಎಸ್. ಪಿ. ಪ್ರಿಯದರ್ಶಿನಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬಸವಾದಿ ಶರಣರ ಶ್ರೇಷ್ಠ ತತ್ವಗಳಾದ ಕಾಯಕ, ದಾಸೋಹ, ವಿಭೂತಿ ಧಾರಣೆ, ಇಷ್ಟಲಿಂಗಪೂಜೆ, ರುದ್ರಾಕ್ಷಿ ಧಾರಣೆ ಹಾಗೂ ಸಮಾನತೆಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಅಡಗಿದೆ. ಉದಾ: ಕಾಯಕ ತತ್ವವನ್ನು ದೈವತ್ವಕ್ಕೇರಿಸಿದವರು ಬಸವಾದಿ ಶರಣರು. ‘ಕಾಯಕವೇ ಕೈಲಾಸ’ವೆಂದು ಹೇಳಿ ಯಾವುದೆ ಕೆಲಸದಲ್ಲಿ ಮೇಲು-ಕೀಳೆಂಬುದಿಲ್ಲ, ಕೇವಲ ಸಂಬಳಕ್ಕಾಗಿ ದುಡಿಯದೇ ಶದ್ಧೆ, ನಿಷ್ಠೆಯಿಂದ ಕೆಲಸ ಮಾಡಿ ಅದರಲ್ಲಿ ದೇವರನ್ನು ಕಾಣಬೇಕು.
ಅದರಂತೆ ಕಾಯಕದಿಂದ ಬಂದ ಲಾಭದಲ್ಲಿ ಸ್ವಲ್ಪ ಭಾಗವನ್ನು ದಾಸೋಹಕ್ಕೆ ಸಮರ್ಪಣೆಯಾಗಬೇಕು. ಮತ್ತು ದಾಸೋಹವೆಂದರೆ ಕೇವಲ ಸಂಪತ್ತಿನ ವಸ್ತುಗಳನ್ನು ಕೊಡುವುದಷ್ಟೇ ಅಲ್ಲ, ಇನ್ನೊಬ್ಬರ ಕೂಡಾ ಒಳ್ಳೆಯ ಮಾತುಗಳನ್ನಾಡುವುದು ಕೂಡಾ ದಾಸೋಹ. ಇನ್ನೊಬ್ಬರು ಉಪಕಾರು ಸ್ಮರಣೆ ಮಾಡಲೆಂಬ ಉದ್ದೇಶದಿಂದ ಸಹಾಯ(ದಾಸೋಹ) ಮಾಡಬಾರದು ಅಥವಾ ಅವರೇ ಮರಳಿ ಸಹಾಯ ಮಾಡಬೇಕೆಂದೇನಿಲ್ಲ, ದೇವರು ನಮಗೆ ಬೇರೆ ರೂಪದಲ್ಲಿ ಸಹಾಯ ಮಾಡಬಹುದು ಎಂದು ಬೆಳಗಾವಿಯ ಪ್ರೊಬೇಶನರಿ ಡಿ. ವೈ. ಎಸ್. ಪಿ ಶ್ರೀಮತಿ ಪ್ರಿಯದರ್ಶಿನಿ ಈಶ್ವರ ಸಾನಿಕೊಪ್ಪ ಹೇಳಿದರು.
ಇದನ್ನೂ ಓದಿ >>> ಸನ್ಮಾನದ ಹಣವನ್ನು ಅನಾಥಾಶ್ರಮಕ್ಕೆ ನೀಡಿದ ಪ್ರೊ. ಹೊಸಮನಿ
ಅವರು ಬೆಳಗಾವಿಯ ಶ್ರೀ ಕಾರಂಜಿಮಠದಲ್ಲಿ ನಡೆದ ೨೨೭ನೇ ಮಾಸಿಕ ಶಿವಾನುಭ ಕಾರ್ಯಕ್ರಮದಲ್ಲಿ “ಬಸವಾದಿ ಶರಣರು ಆಚರಿಸಿದ ಜೀವನ ಮೌಲ್ಯಗಳು” ಎಂಬ ವಿಷಯ ಕುರಿತು ಮಾತನಾಡುತ್ತಾ ಮೇಲಿನಂತೆ ನುಡಿದರು.
ಶ್ರೀಮಠದ ಪೂಜ್ಯರಾದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳವರ ಪಾವನ ಸಾನಿಧ್ಯ ಹಾಗೂ ಉತ್ತರಾಧಿಕಾರಿಗಳಾದ ಪೂಜ್ಯಶ್ರೀ ಶಿವಯೋಗಿ ದೇವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ನಾಗನೂರು ಶ್ರೀ ರುದ್ರಾಕ್ಷಿಮಠದ ನೂತನ ಉತ್ತರಾಧಿಕಾರಿಗಳಾದ ಪೂಜ್ಯಶ್ರೀ ಡಾ. ಸಾವಳಗೀಶ್ವರ ದೇವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಪ್ರೊ. ಶ್ರೀಕಾಂತ ಶಾನವಾಡ ಸ್ವಾಗತ, ಸಾಹಿತಿ ಶ್ರೀ ಪ್ರಾಕಾಶ ಗಿರಿಮಲ್ಲನವರ ಪರಿಚಯ, ಪ್ರೊ. ಜಿ. ಕೆ. ಖಡಬಡಿಯವರು ಗ್ರಂಥಪುಷ್ಪಾರ್ಪಣೆ ಮಾಡಿದರು. ನ್ಯಾಯವಾದಿ ಶ್ರೀ ವಿ. ಕೆ. ಪಾಟೀಲ ಶರಣು ಸಮರ್ಪಣೆ ಹಾಗೂ ಎ. ಕೆ. ಪಾಟೀಲ ನಿರೂಪಣೆ ಮಾಡಿದರು ಶ್ರೀ ಮಠದ ಮಾತೃಮಂಡಳಿಯಿಂದ ವಚನ ಪ್ರಾರ್ಥನೆಯಾಯಿತು.////
Web Title : In the principles of Basavadi, there is scientific and rational
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ