ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ -ಒಂದೇ ಸೂರಿನಡಿ ಹಲವಾರು ಸೇವೆಗಳನ್ನು ಒದಗಿಸುತ್ತಿರುವ ಜೊಲ್ಲೆ ಉದ್ಯೋಗ ಸಮೂಹವು ಸಾವಿರಾರು ಯುವಕರಿಗೆ ಇಂತಹ ಸಂಸ್ಥೆಗಳ ಹುಟ್ಟು ಹಾಕುವುದರ ಮೂಲಕ ಉದ್ಯೋಗ ಅವಕಾಶ ನೀಡಿದೆ. ಗ್ರಾಹಕರಿಗೆ ಆರ್ಥಿಕ ಸೇವೆ, ಗೃಹೋಪಯೋಗಿ, ದಿನಸಿ ವಸ್ತುಗಳ ಮಾರಾಟ, ಶೈಕ್ಷಣಿಕ ಸೇವೆ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶ್ರೀ ಪ್ರಾಣಲಿಂಗ ಮಾಹಾಸ್ವಾಮಿಗಳು ಮಾತನಾಡಿದರು.
ನಿಪ್ಪಾಣಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಲಾದ ಜ್ಯೋತಿ ಸೊಸೈಟಿಯ ಶಾಖೆಯನ್ನು ಪ. ಪೂ. ಶ್ರೀ ಪ್ರಾಣಲಿಂಗ ಮಾಹಾಸ್ವಾಮಿಗಳು ಗಣ್ಯರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ನಾಗರಿಕ ಸರಬರಾಜು ಸಚಿವರ ೫೦ ನೇ ಹುಟ್ಟು ಹಬ್ಬದ ನಿಮಿತ್ಯ ನಿಪ್ಪಾಣಿ ತಾಲೂಕಿನ ಬೂದಿಹಾಳ, ಮೂಡಲಗಿ ತಾಲೂಕಿನ ಕುಲಗೋಡ, ಮತ್ತು ಹಳ್ಳೂರ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ಜ್ಯೋತಿ ವಿವಿಧ ಉದ್ದೇಶಗಳ ಸಹಕಾರಿ ಸಂಘ ನಿಯಮಿತದ ೪ ನೂತನ ಶಾಖೆಗಳನ್ನು ಪ್ರಾರಂಭಿಸಲಾಗಿದೆ.
ಈಗಾಗಲೇ ಸೊಸೈಟಿಯಿಂದ ಜಿಲ್ಲೆಯಾದ್ಯಂತ ವಿವಿಧೆಡೆ ೧೪ ಜ್ಯೋತಿ ಬಜಾರ ಶಾಖೆ, ಜ್ಯೋತಿ ಬಟ್ಟೆ ಅಂಗಡಿ, ಜ್ಯೋತಿ ಔಷಧ ಅಂಗಡಿ, ಆರ್ಥಿಕವಾಗಿ ಸೇವೆ ಸಲ್ಲಿಸುವ ಸದುದ್ದೇಶದಿಂದ ಗ್ರಾಹಕರಿಗೆ ಜ್ಯೋತಿ ಕ್ರೇಡಿಟ್ ವಿಭಾಗದ ೨೦ ಶಾಖೆಗಳನ್ನು ಪ್ರಾರಂಭಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಗ್ರಾಹಕರ ವಿಶ್ವಾಸನೀಯ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಜ್ಯೋತಿಪ್ರಸಾದ ಜೊಲ್ಲೆ, ಜ್ಯೋತಿ ಸೋಸೈಟಿಯ ಉಪಾಧ್ಯಕ್ಷರಾದ ದಿನಕರ ಪೇಟಕರ, ನಿರ್ದೇಶಕರಾದ ಕಲ್ಲಪ್ಪಾ ಜಾದವ, ಮಲಗಂಡ ಪಾಟೀಲ, ಕಲ್ಲಪ್ಪ ನಾಯಿಕ, ಚಂದ್ರಕಾಂತ ಖೋತ, ಶರಪುದ್ದೀನ ಮುಲ್ಲಾ, ಬಾಳಕೃಷ್ಣ ಬಾಕಳೆ, ಪ್ರಧಾನ ವ್ಯವಸ್ಥಾಪಕರಾದ ವಿಜಯ ಖಡಕಭಾವಿ, ಎಣ್ಣೆ ಬೀಜ ಬೆಳೆಗಾರ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷ್ಮಣ ಕಬಾಡೆ, ಸಾಗರ ದೇಸಾಯಿ, ಅನಿತಾ ದೇಸಾಯಿ, ಸುನೀಲ ಸಂಕಪಾಳ, ರವಿ ಲೋಹಾರ ಶಂಕರ ಶಿರಗಾಂವೆ, ಮತಾಬ ಮಕಾಂದರ, ಮನೋಹರ ಕುಪ್ಪಾನಟ್ಟಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ