GIT add 2024-1
Kore@40
Beereshwara 33

ಬಾಲ ಸಂಸ್ಕಾರ ಶಿಬಿರ ಉದ್ಘಾಟನೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಜಾವು ಬ್ರಿಗೇಡ್‌ನ ರಾಜಮಾತಾ ಜಿಜಾವು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಿಂದೂ ಬಾಲ ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿತ್ತು.

Emergency Service

ಉದಯ ಭವನದಲ್ಲಿ ಬುಧವಾರ ಡಾ ಸೊನಾಲಿ ಸರ್ನೋಬತ್ ಮತ್ತು ಇತರ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಶಿಬಿರ ಉದ್ಘಾಟಿಸಲಾಯಿತು. 1ರಿಂದ 10 ನೇ ತರಗತಿಯವರೆಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಒಂದು ದಿನದ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರಕ್ಕೆ ಕಿಶೋರ್ ಕಾಕಡೆ ಮತ್ತು ಡಾ ಸೊನಾಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಸೋನಾಲಿ ಸರ್ನೋಬತ್, ಶಿಬಿರದ ಉದ್ದೇಶವನ್ನು ವಿವರಿಸಿದರು. ಕಾಕಡೆ ಅವರು ದೇಶಭಕ್ತಿ ಗೀತೆಗಳನ್ನು ಕಲಿಸಿದರು. ಡಾ ಸೊನಾಲಿ ಹಿಂದೂ ಧರ್ಮದ ಸಂಸ್ಕೃತಿ ಕುರಿತು ಮಾಹಿತಿ ನೀಡಿದರು. ನಿಮಾಯಿ ಪಾಟೀಲ್ ಅವರು ಜೀವನದಲ್ಲಿ ಯೋಗದ ಮಹತ್ವದ ಕುರಿತು ತಿಳಿಸಿದರು.

ಭೋಜನದ ನಂತರದ ಅವಧಿಯಲ್ಲಿ, ಸುನೀತಾ ಪಾಟಣಕರ್ ಅವರು ಕಲೆ ಮತ್ತು ಕರಕುಶಲ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಕಾಂಚನ್ ಚೌಗುಲೆ, ಗೀತಾ ಚೌಗುಲೆ, ಆಶಾರಾಣಿ ನಿಂಬಾಳ್ಕರ್, ನೀನಾ ಕಾಕತ್ಕರ್, ಮಂಗಲ್ ಪಾಟೀಲ್, ಚಂದ್ರ ಚೋಪ್ಡೆ, ದೀಪಾಲಿ ಮಲಕಾರಿ, ವೃಶಾಲಿ ಮೋರೆ, ವಿದ್ಯಾ ಸರ್ನೋಬತ್, ರಾಜಶ್ರಿ ಆಜಗಾಂವ್ಕರ್ ಮುಂತಾದವರು ವಿಶೇಷ ಸಹಕಾರ ನೀಡಿದರು.

Laxmi Tai add
Bottom Add3
Bottom Ad 2