
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಡೀಮ್ಡ್ ಯುನಿವರ್ಸಿಟಿ)ಯ NSS ಘಟಕದ ರಾಷ್ಟ್ರೀಯ ಐಕ್ಯತಾ ಶಿಬಿರ ಜೆಎನ್ ಎಂಸಿ ಆವರಣದ ಡಾ.ಬಿ.ಎಸ್. ಕೋಡ್ಕಣಿ ಸಭಾಂಗಣದಲ್ಲಿ ಇಂದಿನಿಂದ 23ರವರೆಗೆ ನಡೆಯಲಿದೆ.
NSS ಘಟಕ, ಕಾಹೇರ ಬೆಳಗಾವಿ, NSS ರಾಜ್ಯ ಕೋಶ ಹಾಗೂ NSS ಪ್ರಾದೇಶಿಕ ನಿರ್ದೇಶನಾಲಯದ ಜಂಟಿ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ.
ಜ.17ರಂದು ಸಂಜೆ 5ಕ್ಕೆ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಶಿಬಿರ ಉದ್ಘಾಟಿಸಲಿದ್ದಾರೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ರಾಜ್ಯ NSS ಅಧಿಕಾರಿ ಪ್ರತಾಪ ಲಿಂಗಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
NSS ಪ್ರಾದೇಶಿಕ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಕೆ.ವಿ.ಖಾದ್ರಿ ನರಸಿಂಹಯ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕಾಹೇರ ಕುಲಪತಿ ಪ್ರೊ. ಡಾ. ನಿತಿನ್ ಗಾಣಗೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು NSS ಕಾರ್ಯಕ್ರಮ ಸಂಯೋಜಕಿ ಡಾ. ಅಶ್ವಿನಿ ನರಸಣ್ಣವರ ಹಾಗೂ ರಜಿಸ್ಟ್ರಾರ್ ಪ್ರೊ. ಡಾ.ವಿ.ಎ.ಕೋಠಿವಾಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಮನೆಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆದ ದುಷ್ಕರ್ಮಿ*
https://pragati.taskdun.com/23-years-girlmurderknife-attakmangalore/
*ಶಕ್ತಿಪ್ರದರ್ಶನಕ್ಕೆ ಸಜ್ಜಾದ ಪಂಚಮಸಾಲಿ ಸಮುದಾಯ*
https://pragati.taskdun.com/panchamasali-reservationprotestbasavajaya-mrutyunjaya-swamiji/
*ಜನವರಿ 19ಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಧಾನಿ ಮೋದಿ ಪ್ರವಾಸ; ಸಂಚಾರ ಮಾರ್ಗ ಬದಲಾವಣೆ*
https://pragati.taskdun.com/pm-narendra-modikalyana-karnatakakalaburgiyadagiri-visit/