Belagavi NewsBelgaum News

*ಭರಮಕೋಡಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ತಾಲೂಕಿನ ಸಂಕೊನಟ್ಟಿ ಗ್ರಾಮ ಪಂಚಾಯತಿಗೆ ಒಳಪಡುವ ಭರಮಕೋಡಿಯಲ್ಲಿ ನೂತನ ಅಂಗನವಾಡಿ ಕೇಂದ್ರ ವನ್ನೂ ಗ್ರಾಮದ ಹಿರಿಯರು ಉದ್ಘಾಟಿಸಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯರದ ಪ್ರಿಯದರ್ಶಿನಿ ಬಿರಾದರ್ ಮಾತನಾಡಿ ಭರಮಕೋಡಿಯಲ್ಲಿ ಈಗಾಗಲೇ ಒಂದು ಅಂಗನವಾಡಿ ಕೇಂದ್ರ ಇದ್ದು ಜನ ಸಂಖ್ಯೆ ಅನುಗುಣವಾಗಿ. ಮತ್ತೊಂದು ಅಂಗನವಾಡಿ ಕೇಂದ್ರ ಕೊಡಬೇಕೆಂದು ಬಹುದಿಗಳಿಂದ ಬೇಡಿಕೆಯಾಗಿತ್ತು.  ಈಗ ಈ ಬೇಡಿಕೆ  ಈಡೇರಿದಂತಾಗಿದೆ. ನೂತನ ಅಂಗನವಾಡಿ ಕೇಂದ್ರ ಶಿಕ್ಷಣಕ್ಕಾಗಿ ಕಾಯುತ್ತಿರುವ ಪುಟಾಣಿಗಳಿಗೆ  ಅಂಗನವಾಡಿ ಕೇಂದ್ರ ಭರವಸೆಯ ದಾರಿಯನ್ನು ಸುಗಮಗೊಳಿಸಲಿ ಎಂದರು.

ಈ ವೇಳೆ ಹಿರಿಯರಾದ ಅಪ್ಪಾ ಯಶವಂತ ಗಡದೆ, ಮಾದೇವ್ ಅಣ್ಣಪ ಪೂಜಾರಿ,  ಗ್ರಾಮ ಪಂಚಾಯತ ಸದಸ್ಯರುಗಳಾದ ಶಂಕರ್ ಗಡದೇ, ದುಂಡಪ್ಪ ಕಲಾಗುಣಿ,ಸುವರ್ಣಾ ಸಾಳುಂಕೆ, ಸಂಬಾಜಿ ಗಡದೆ, ವಿಠ್ಠಲ್ ಮಟಗಾರ, ಮಾಜಿ ಸೈನಿಕರು ಶಿವಶಂಕರ್ ಭೇವನೂರು, ಕಾರ್ಯಕರ್ತೆ ಶಾಹಿದಾ ಝಾರೆ, ಸುಮಿತ್ರಾ ಸಾಳುಂಕೆ,ಪುಷ್ಪಾಂಜಲಿ ಚೌವಾನ,ಅನ್ನಪೂರ್ಣ ಯಂಕಚ್ಚಿ ಮಾಲವ್ವ ಭೇವನೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button