
ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಹಸುವನ್ನು ಗೋಮಾತೆ, ಕಾಮಧೇನು ಎಂದು ಪೂಜಿಸುತ್ತೇವೆ. ಆದರೆ ಇಲ್ಲೋರ್ವ ಕಾಮಪಿಪಾಸು ಹಸುವಿನ ಜೊತೆಯೇ ಅಸಹಜ ಲೈಂಗಿಕ ಕ್ರಿಯೆ ನಡೆಸಿರುವುದು ಬೆಳಕಿಗೆ ಬಂದಿದೆ.
ಕೇರಳದ ಕೊಯಿಕ್ಕೋಡ್ ನ ಕುನ್ನಮಂಗಕಂ ಎಂಬಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮುರಳೀಧರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಮುಕನ ಅಸಂಬದ್ಧ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಲಿಯವಯಾಲ್ ಮುಲ್ಲೆರಿಕುನುಮೆಲ್ ನಿವಾಸಿಯಾಗಿರುವ ಮುರಳೀಧರನ್, ರಾತ್ರಿ ತನ್ನ ಮನೆಯಿಂದ 12 ಮೈಲಿ ದೂರವಿದ್ದ ಚಥಮಂಗಲಂ ಎಂಬುವವರ ಮನೆಯ ಹಸುವಿನ ಮೇಲೆ ಆರೋಪಿ ಈ ದುಷ್ಕೃತ್ಯ ಎಸಗುತ್ತಿದ್ದ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಬಿಚ್ಚಿಕೊಂಡು ಹೊರಗಡೆ ಕೆರೆದೊಯ್ದು ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.
ಈ ಕೃತ್ಯ ಹಸುವಿನ ಮಾಲೀಕನ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಮುಕನ ನೀಚ ಕೃತ್ಯ ಬಯಲಾಗಿದೆ. ಹಸುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಹಸುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆದಿರುವುದು ದೃಢಪಟ್ಟಿದೆ.