Kannada NewsKarnataka NewsNationalPolitics

*ತುರ್ತು ಸಭೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ತುರ್ತು ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಡೆಂಘಿ ಟೆಸ್ಟಿಂಗ್ ಹೆಚ್ಚಳ ಮಾಡಲಾಗಿದ್ದು, ರಾಜ್ಯದಲ್ಲಿ ಒಟ್ಟು6,187 ಪ್ರಕರಣಗಳು ಇದ್ದು, 3,463 ಪ್ರಕರಣ ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. ಇನ್ನು ಶೇ.47 ನಗರ ಪ್ರದೇಶಗಳಲ್ಲಿ ಡೆಂಘಿ ಕೇಸ್ ಪತ್ತೆಯಾಗಿವೆ. ಎಲ್ಲೆಲ್ಲಿ ಡೆಂಘಿ ಪಾಸಿಟಿವ್ ಕೇಸ್ ಹೆಚ್ಚಾಗಿ ಪತ್ತೆಯಾಗುತ್ತಿವೆಯೋ ಅಲ್ಲೆಲ್ಲ ತೀವ್ರ ನಿಗವಹಿಸಬೇಕು ಮತ್ತು ಲಾರ್ವ ನಾಶ, ಫಾಗಿಂಗ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಹವಮಾನ ಬದಲಾವಣೆಯಿಂದ ರೋಗ ಉಲ್ಭಣಗೊಳ್ಳುತ್ತಿರುವ ಕಾರಣ ಈ ವರ್ಷ ಹವಮಾನ ಬದಲಾವಣೆಯಿಂದ ಡೆಂಘಿ ಕೇಸ್ ಹೆಚ್ಚಾಗಿದೆ. ಜನವರಿಯಿಂದ ಜು.1ರವರೆಗೆ ಒಟ್ಟು 6,187 ಕೇಸ್ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಡೆಂಘಿ ಕುರಿತಾಗಿ 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಇನ್ನೂ ಡೆಂಘಿ ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದರಲ್ಲದೇ, NS1 ಕಿಟ್ ಗಳನ್ನು ಖರೀದಿಸಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಂದು ವರ್ಷದೊಳಗಿನ 123 ಮಕ್ಕಳಲ್ಲಿ ಡೆಂಘಿ ಜ್ವರ ಕಾಣಿಸಿಕೊಂಡಿದೆ. ಇನ್ನು ವಯೋಮಾನವಾರು ನೋಡುವುದಾರೆ 1-18 ವರ್ಷದ ಮಕ್ಕಳು 2,301, 19-60 ವರ್ಷದ 3313 ಜನರಿಗೆ ಹಾಗೂ 61 ವರ್ಷ ಮೇಲ್ಪಟ್ಟ 450 ಮಂದಿಗೆ ಡೆಂಘಿ ಜ್ವರ ಬಂದಿದೆ. 6 ಜನರ ಸಾವಾಗಿದ್ದು, ಮೂವರು ಕೋಮಾರ್ಬಿಟ್ ನಿಂದ ಮೃತಪಟ್ಟಿದ್ದಾರೆ. ಇದಲ್ಲದೇ ಬೇರೆ-ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದವರು ಸಹ ಡೆಂಘಿಗೆ ಬಲಿಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button