*ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಖಿಲ ಕರ್ನಾಟಕ ರೈತ ಸಂಘ, ಅಖಿಲ ಕರ್ನಾಟಕ ಮಹಿಳಾ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮಂಗಳವಾರದಿಂದ ಪ್ರಾರಂಭಿಸಿದ್ದಾರೆ.
ರೈತರ ಸಮಸ್ಯೆಗಳಿಗೆ ಪರಿಹಾರ ಕೊಡಿ ಇಲ್ಲ, ವಿಷಕೊಡಿ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಪ್ರಮುಖ ಬೇಡಿಕೆಗಳು ಮಹದಾಯಿ ನದಿಯ ಕಳಸಾ ಬಂಡೂರಿ ಯೋಜನೆ ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭಿಸಬೇಕು. ರೈತರ ಪಂಪಸೆಟ್ ಗಳಿಗೆ ತಂದ ಹೊಸ ಕಾಯ್ದೆಯನ್ನು ಕೈ ಬಿಡಬೇಕು. ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ ಹಾಗೂ ಆನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ ಅದಕ್ಕಾಗಿ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲವನ್ನು ಮನ್ನಾ ಮಾಡಬೇಕು.ರೈತರ ಹಕ್ಕು ಹಿತರಕ್ಷಣಾ ಕಾನೂನು ಹಾಗೂ ರೈತ ಕೃಷಿ ಪರಿಷತ್ ರಚಿಸುವುದು. ಬಗರ್ ಹುಕುಂ ಸಾಗುವಳಿ ಮಾಡಿದ ರೈತರಿಗೆ ಹಕ್ಕು ಪತ್ರ ವಿತರಿಸುವುದು.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಬಳ್ಳಾರಿಯಿಂದ ಅಕೋಲಾ ರಾಷ್ಟ್ರೀಯ ಹೆದ್ದಾರಿ ಎನ್. ಎಚ್ 63 ಅಣ್ಣಿಗೇರಿ ಎಂಟ್ರಸ್ಸ ರಿಂಗ್ ರೋಡ್ ಓವರ್ ಬ್ರಿಜ್ ನಿರ್ಮಾಣ ಮಾಡುವುದು, ಹರಜನ ಕೆರಿ ಬಳಿ ಓವರ್ ಬ್ರಿಜ್ ನಿರ್ಮಾಣ ಮಾಡುವುದು, ಅಣಿಗೇರಿ ಪಟ್ಟಣದಲ್ಲಿ ಶೀಘ್ರವಾಗಿ ಕೋರ್ಟ್ ಪ್ರಾರಂಭಿಸುವುದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿರ್ವತಿಸುವುದು, ರಾಜೀವ ಗಾಂಧಿ ವಸತಿ ಗ್ರಹಗಳ ಹಂಚಿಕೆಯಲ್ಲಿ ಆದ ಮೋಸವನ್ನು ತನಿಖೆ ಮಾಡುವುದು. ಹಿಡಕಲ್ ಜಾಲಾಶಯದಿಂದ ಮುಳಗಡೆಯಿಂದ ಆಶ್ರಯ ಕಳೆದುಕೊಂಡು ಖಾನಾಪುರ ತಾಲೂಕಿನ ಸುರಪುರ ಹಾಗೂ ಕೆರವಾಡ ಗ್ರಾಮದಲ್ಲಿ ವಾಸವಾದ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಖಾನಾಪುರ ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿಗೆ ಶೀಘ್ರವಾಗಿ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸುವುದು. ರಾಷ್ಟ್ರೀಯ ಹೆದ್ದಾರಿ ಟೋಲ್ ಅವಧಿ ಮುಗಿದರು ಶುಲ್ಕ ವಸುಲಿ ಮಾಡುತ್ತಿದ್ದಾರೆ ಅದನ್ನು ಆದಷ್ಟು ಬೇಗ ಬಂದ ಮಾಡಬೇಕು. 60 ಕಿಮಿ ಅಂತರದ ಗ್ರಾಮದ ಗ್ರಾಮಸ್ತರಿಗೆ ಉಚಿತವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಈ ಅನೇಕ ಬೇಡಿಕೆ ಇಟ್ಟು ಕೊಂಡುಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡುತ್ತಿದ್ದಾರೆ. ನಾಳೆ ರಾಜ್ಯದ ಅನೇಕ ಕಡೆಯಿಂದ ರೈತ ಸಂಘಟಣೆ ಮುಂಖಡರು ಹಾಗೂ ರೈತರು ಪಾಲ್ಗೊಂಳಲಿದ್ದಾರೆ ಎಂದು ರೈತ ಮುಂಖಡರು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಅನಿಗೇರಿ ಪಟ್ಟಣದ ಬಳ್ಳಾರಿಯಿಂದ ಅಕೋಲಾ ರಾಷ್ಟೀಯ ಹೆದ್ದಾರಿ ಎನ್. ಎಚ್ 63 ಅಣಿಗೇರಿ ಎಂಟ್ರಸ್ಸ ರಿಂಗ್ ರೋಡ್ ಓವರ್ ಬ್ರಿಜ್ ನಿರ್ಮಾಣ ಮಾಡುವುದ. ಹರಜನ ಕೆರಿ ಬಳಿ ಓವರ್ ಬ್ರಿಜ್ ನಿರ್ಮಾಣ ಮಾಡುವುದು. ಅಣಿಗೇರಿ ಪಟ್ಟಣದಲ್ಲಿ ಶೀಘ್ರವಾಗಿ ಕೋರ್ಟ್ ಪ್ರಾರಂಭಿಸುವುದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿರ್ವತಿಸುವುದು, ರಾಜೀವ ಗಾಂಧಿ ವಸತಿ ಗ್ರಹಗಳ ಹಂಚಿಕೆಯಲ್ಲಿ ಆದ ಮೋಸವನ್ನು ತನಿಖೆ ಮಾಡುವುದು. ಹಿಡಕಲ್ ಜಾಲಾಶಯದಿಂದ ಮುಳಗಡೆಯಿಂದ ಆಶ್ರಯ ಕಳೆದುಕೊಂಡು ಖಾನಾಪುರ ತಾಲೂಕಿನ ಸುರಪುರ ಹಾಗೂ ಕೆರವಾಡ ಗ್ರಾಮದಲ್ಲಿ ವಾಸವಾದ ಗ್ರಾಮಗಳನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಖಾನಾಪುರ ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿಗೆ ಶೀಘ್ರವಾಗಿ ಸರ್ಕಾರಿ ಕಚೇರಿಗಳನ್ನು ಪ್ರಾರಂಭಿಸುವುದು. ರಾಷ್ಟ್ರೀಯ ಹೆದ್ದಾರಿ ಟೋಲ್ ಅವಧಿ ಮುಗಿದರು ಶುಲ್ಕ ವಸುಲಿ ಮಾಡುತ್ತಿದ್ದಾರೆ ಅದನ್ನು ಆದಷ್ಟು ಬೇಗ ಬಂದ ಮಾಡಬೇಕು. 60 ಕಿಮಿ ಅಂತರದ ಗ್ರಾಮದ ಗ್ರಾಮಸ್ತರಿಗೆ ಉಚಿತವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಈ ಅನೇಕ ಬೇಡಿಕೆ ಇಟ್ಟು ಕೊಂಡುಅನಿರ್ದಿಷ್ಟಾವಧಿ ಮುಷ್ಕರವನ್ನು ಮಾಡುತ್ತಿದ್ದಾರೆ. ಹೋರಾಟ ಸ್ಥಳಕ್ಕೆ ಮಾಜಿ ಸಚಿವರಾದ ಶಶಿಕಾಂತ ನಾಯಕ ಬೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಬೀರಪ್ಪ ದೇಶನೂರ, ಹನುಮಂತಪ್ಪ ದಿವಿಗೆಹಳ್ಳಿ, ಮಹಾದೇವಿ ಹೂವಿಲಾಗೋಳ ಮಾಲತೇಶ ಛತ್ರದ, ಬಸವರಾಜ ಮೋಕಾಶಿ, ಬಸವರಾಜ ಕೋಡಿಹಳ್ಳಿ, ಗಣೇಶ ಈಳಿಗೇರ, ರುದ್ರಪ್ಪ ಕೊಡ್ಲಿ, ಸಂಜೀವಕುಮಾರ ತಿಲಗರ, ಕಿಶೋರ ಮಿಠಾರಿ, ಮಡಿವಾಳಪ್ಪ ಪಟ್ಟಣಶೆಟ್ಟಿ, ಸಿದ್ರಮ ಗಂಗಿ, ಮಾಹಾತೇಶ ಕಾಮತ, ನಾಗರಾಜ ಹೂಗಾರ, ಈರಣ್ಣಾ ಅಂಗಡಿ, ಮಹಾತೇಶ ಗೌರಿ, ಕಲಗೌಡ ಪಾಟೀಲ, ಚನ್ನಗೌಡಪಾಟೀಲ, ವೀರನಗೌಡ ಪಾಟೀಲ ಸೇರಿದಂತೆ ಅನೇಕರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ