Belagavi NewsBelgaum NewsKannada NewsKarnataka NewsNationalPolitics

*ಚಕ್ರವರ್ತಿ ಸುಲಿಬೆಲೆ ನೇತೃತ್ವದಲ್ಲಿ ಸ್ವಾತಂತ್ರ್ಯ ಶ್ರಾವಣ ಹಬ್ಬ ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಚಕ್ರವರ್ತಿ ಸುಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ವತಿಯಿಂದ ಸ್ವಾತಂತ್ರ್ಯ ಹಬ್ಬವನ್ನು ಸ್ವಾತಂತ್ರ್ಯ ಶ್ರಾವಣ ಎಂದು ಅತೀ ವಿಜೃಭಂಣೆಯಿಂದ  ಆಚರಣೆ ಮಾಡಲಾಗಿದೆ.

ಇಂದು ಬೆಳಗಾವಿ ನಗರದಲ್ಲಿ  78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಬೃಹತ್ ಜಾಥ್ ನಡೆಸಲಾಯಿತು.  ಈ ವೇಳೆ ಜಾಜಪಥಕ, ಢೋಲ್ ತಾಶ್, ಪಾರಂಪರಿಕ ವಾಧ್ಯಗಳನ್ನು ನೂಡಿಸಲಾಯಿತು. ಮಹಿಳೆಯರು ಕೇಸರ ಪೇಟ ಧರಿಸಿದ ಗಮನ ಸೇಳೆದರು. ಜಾಥದಲ್ಲಿ ಭಾಗವಹಿಸಿದ ಮಹಿಳೆಯರು ಹಾಗೂ ಪರುಷರು ಕುಣಿಯುವ ಮೂಲಕ ವಿಜೃಂಭಿಸಿದರು. 

ಈ ವೇಳೆ ಮಾತನಾಡಿದ ಯುವ ಬ್ರಿಗೆಡ್ ಮುಖಂಡ ಚಕ್ರವರ್ತಿ ಸುಲಿಬೆಲೆ ಅವರು, ಪ್ರತಿವರ್ಷ ಸ್ವಾತಂತ್ರ್ಯ ಹಬ್ಬವನ್ನು ಸ್ವಾತಂತ್ರ್ಯ ಶ್ರಾವಣ ಎಂದು ಆಚರಣೆ ಮಾಡುತ್ತೇವೆ. ಪ್ರತಿವರ್ಷ ಬೇರೆ ಬೇರೆ ಜಿಲ್ಲೆಯಲ್ಲಿ ಆಚರಣೆ ಮಾಡುತ್ತೇವೆ. ಈ ವರ್ಷ ಗಂಡುಮೆಟ್ಟಿದ ನಾಡು ಕುಂದಾನಗರಿಯಲ್ಲಿ ಆಚರಣೆ ಮಾಡಲಾಗುತ್ತಿದೆ.‌ ವಿಷೇಶವಾಗಿ ತರುಣ ತರುಣಿಯರು ಸೇರಿ ಭಾರತ ಮಾತೆಯ ಮೆರವಣಿಗೆ ಮಾಡುತ್ತಿದ್ದೇವೆ. ಭಾರತವನ್ನು ವಿಶ್ವಗುರು ಮಾಡಬೇಕು ಎಂಬ ದೃಷ್ಟಿಯಿಂದ ಉತ್ಸಾಹದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ತಿಳಿಸಿದರು.

 https://pragativahini.com/remember-the-great-men-and-stalwarts-who-fought-for-freedom-rahul-shinde-ceo-of-gpm/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button