
ಈ ಘಟಕ ಪ್ರತಿ ನಿಮಿಷಕ್ಕೆ 570 ಲೀಟರ್ ಉತ್ಪಾದನೆಯನ್ನು ದಿನಕ್ಕೆ 120 ಜಂಬು ಸಿಲಿಂಡರ್ ಆಕ್ಷಿಜನ್ ಉತ್ಪಾದಿಸುವ ಸಾಮರ್ಥ್ಯ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ನಾಯಿಂಗ್ಲಜದಲ್ಲಿ ದಿನಕ್ಕೆ 120 ಜಂಬು ಸಿಲಿಂಡರ್ ಆಕ್ಷಿಜನ್ ಉತ್ಪಾದಿಸುವ ಘಟಕದ ಕಾಮಗಾರಿಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.
ಕೊರೋನಾದ 3ನೇ ಅಲೆಯಲ್ಲಿ ಆಕ್ಷಿಜನ್ ಕೊರತೆ ಉಂಟಾಗಬಾರದು ಎನ್ನುವ ಮುಂದಾಲೋಚನೆಯಿಂದ ಇವತ್ತು ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ ಗ್ರಾಮದ ತಮ್ಮದೇ ಒಡೆತನದ ಮ್ಯಾಗ್ನಿಷಿಯಂ ಟಫ್ ಗ್ಲಾಸ್ ಕಾರ್ಖಾನೆಯ ಆವರಣದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಉತ್ಪಾದಿಸುವ ಘಟಕದ ಕಾಮಗಾರಿಗೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆಯನ್ನು ನೀಡಿದರು.

ನಂತರ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ ಮಾತನಾಡಿ ಕೊರೋನಾ ನಿಯಂತ್ರಣಕ್ಕೆ ಜೊಲ್ಲೆ ಕುಟುಂಬವು ಒಳ್ಳೆ ರೀತಿಯಾಗಿ ಕೇಲಸ ಮಾಡುತ್ತಿದೆ. ಇವತ್ತು ಜೊಲ್ಲೆ ಕುಟುಂಬವು ಚಿಕ್ಕೋಡಿಯಲ್ಲಿ ಆಕ್ಷಿಜನ್ ಉತ್ಪಾದಿಸುವ ಘಟಕದ ಕಾಮಗಾರಿಗೆ ಚಾಲನೆಯನ್ನು ನೀಡಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಕೊರೋನಾ 3 ನೇ ಅಲೆಗೆ ಸಂಬಂಧಿಸಿದಂತೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಕೊರೋನಾ ಸೋಂಕಿತರಿಗೆ ಆಕ್ಷಿಜನ್ ಕೊರತೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈ ಆಕ್ಸಿಜನ್ ಪ್ಲ್ಯಾಂಟಗೆ ಚಾಲನೆಯನ್ನು ನೀಡಿದ್ದೇವೆ. ಈ ಆಕ್ಸಿಜನ್ ಪ್ಲ್ಯಾಂಟ್ ದಿನಕ್ಕೆ 120 ಜಂಬು ಸಿಲಿಂಡರ್ ಆಕ್ಷಿಜನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವ ಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಆಶಾ ಜ್ಯೋತಿ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆ, ಡಿವೈಎಸ್ಪಿ ಮನೋಜಕುಮಾರ ನಾಯಿಕ, ಸಿಪಿಐ ಸಂಗಮೇಶ ಶಿವಯೊಗಿ, ಪಿಎಸ್ ಐ ಸುರೇಶ ಮಂಟೂರ, ನಿಪ್ಪಾಣಿ ನಗರಸಭೆಯ ಅಧ್ಯಕ್ಷರಾದ ಜಯವಂತ ಭಾಟಲೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ, ಬಿರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ಉಪಾಧ್ಯಕ್ಷ ಸಿದ್ದರಾಮ ಗಢದೆ, ವಿಶ್ವನಾಥ ಕಮತೆ, ಗೋಪಾಲ ನಾಯಿಕ, ಅಪ್ಪಾಸಾಬ ಜೊಲ್ಲೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ