ಪ್ರಗತಿವಾಹಿನಿ ಸುದ್ದಿ, ಕಾಂಗ್ರಾ: ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಆಯೋಜನೆಗೊಂಡಿದ್ದ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಅನ್ನು ಸ್ಥಳಾಂತರಿಸುವ ಸಾಧ್ಯತೆಗಳು ಎದುರಾಗಿವೆ.
ಮಾರ್ಚ್ 1 ರಿಂದ 5 ರವರೆಗೆ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ನ್ನು ಧರ್ಮಶಾಲಾದಿಂದ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿರುವುದಾಗಿ ವರದಿಗಳು ತಿಳಿಸಿವೆ.
ಇತ್ತೀಚೆಗಷ್ಟೇ ಇಲ್ಲಿನ ಕ್ರಿಕೆಟ್ ಮೈದಾನ ನವೀಕರಣಗೊಂಡ ನಂತರ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಲು ಇನ್ನೂ ಯೋಗ್ಯವಾಗಿಲ್ಲ ಎಂಬ ವರದಿಗಳ ಆಧಾರದಲ್ಲಿ ಪಂದ್ಯ ಎತ್ತಂಗಡಿಯಾಗುವ ಸಾಧ್ಯತೆಗಳಿವೆ.
ಇದರೊಂದಿಗೇ ಔಟ್‌ಫೀಲ್ಡ್‌ನಲ್ಲಿರುವ ಚೌಕದ ಬಳಿ ಒಂದು ಸಣ್ಣ ಪ್ಯಾಚ್ ಇನ್ನೂ ಪೂರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ಪಂದ್ಯ ನಡೆಸುವ ನಿರ್ಧಾರ ಕೈಬಿಡಲಾಗುತ್ತಿದೆ. ಪರ್ಯಾಯ ಸ್ಥಳವನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಅದಾನಿ ಕಂಪನಿಯಲ್ಲಿ ವಿದೇಶಿ ಹೂಡಿಕೆ ಬಗ್ಗೆ ಸೆಬಿ ತನಿಖೆ
https://pragati.taskdun.com/sebi-probe-into-foreign-investment-in-adani-company/
ಇಂದು ಲೋಕಾರ್ಪಣೆಯಾಗಲಿದೆ ದೇಶದ 2ನೇ ಭಾರತಮಾತಾ ಮಂದಿರ
https://pragati.taskdun.com/the-2nd-bharat-mata-mandir-of-the-country-will-be-dedicated-today/
*ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ*
https://pragati.taskdun.com/suspected-terroristarrestedbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ