Kannada NewsLatestWorld

*ಮತ್ತೊಂದು F-16 ಯುದ್ಧ ವಿಮಾನ ಪತನ*

ಪ್ರಗತಿವಾಹಿನಿ ಸುದ್ದಿ: ತರಬೇತಿ ಹಾರಾಟ ಮುಗಿಸಿ ವಾಪಸ್‌ ಆಗುತ್ತಿದ್ದ ವೇಳೆ ಅಮೆರಿಕ ವಾಯುಪಡೆಗೆ ಸೇರಿದ ಎಫ್‌-16 ಯುದ್ಧ ವಿಮಾನ ಪತನಗೊಂಡಿರುವ ಘಟನೆ ನಡೆದಿದೆ.

ಜರ್ಮನಿಯ ಪಶ್ಚಿಮ ಭಾಗದಲ್ಲಿರುವ ಸ್ಪಾಂಗ್‌ಡಾಹ್ಲೆಮ್‌ನಲ್ಲಿ ಈ ದುರಂತ ಸಂಭವಿಸಿದೆ. ಕೇವಲ 5 ದಿನಗಳ ಅಂತರದಲ್ಲಿ ನಡೆದ 2ನೇ ದುರಂತವಾಗಿದೆ. 5 ದಿನಗಳ ಹಿಂದೆ ಮಿಚಿಗನ್‌ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್‌ ಏರ್‌ ನ್ಯಾಷನಲ್‌ ಗಾರ್ಡ್‌ಗೆ ಸೇರಿದ F-16 ಯುದ್ಧವಿಮಾನ ಪತನಗೊಂಡಿತ್ತು.

ವಿಮಾನ ದುರಂತ ಸಂಭವಿಸಿದರೂ ಫೈಟರ್‌ ಪೈಲಟ್‌ ಸುರಕ್ಷಿವಾಗಿ ಜೆಟ್‌ನಿಂದ ಹೊರಕ್ಕೆ ಜಿಗಿದಿದ್ದಾರೆ. ಗಾಯಗೊಂಡ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಘಟನಾ ಸ್ಥಳದಲ್ಲಿ ತುರ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.

ಈ F-16 ಯುದ್ಧವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 4 ಯುದ್ಧವಿಮಾನಗಳ ತಂಡದ ಭಾಗವಾಗಿತ್ತು. ಅಪಘಾತ ಸಂಭವಿಸಿದ ಬಳಿಕ ಉಳಿದ ಮೂರು F-16 ವಿಮಾನಗಳು ರಮ್ಸ್‌ಟೈನ್ ಏರ್‌ಬೇಸ್‌ಗೆ ಮಾರ್ಗ ಬದಲಿಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button