*ಭಾರತ ದೇಶ ಪುಣ್ಯ ಭೂಮಿ, ಇಲ್ಲಿ ಹುಟ್ಟಿದವರು ಪುಣ್ಯವಂತರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತ ದೇಶ ಪುಣ್ಯ ಭೂಮಿ, ಇಲ್ಲಿ ಹುಟ್ಟಿದವರು ಪುಣ್ಯವಂತರು ಎಂದು ಮಹಿಳಾ. ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ತಾಲೂಕಿನ ಮುತ್ನಾಳದಲ್ಲಿ ಬುಧವಾರ, ಹಮ್ಮಿಕೊಳ್ಳಲಾಗಿದ್ದ ಲಿಂಗೈಕ್ಯ ಕೇದಾರ ವೈರಾಗ್ಯ ಪೀಠಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಜೀಯವರ ಸಮಾಧಿ ಮಂದಿರದಲ್ಲಿ ಮೂರ್ತಿಯ ಪ್ರತಿಷ್ಟಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಿಂದಾಗಿಯೇ ಭಾರತ ವಿಶ್ವದಲ್ಲೇ ಹೆಸರು ಮಾಡಿದೆ. ಮುತ್ನಾಳ ಗ್ರಾಮ ಮಿನಿ ಹಿಂದುಸ್ತಾನ ಇದ್ದ ಹಾಗಿದೆ. ಇಲ್ಲಿ ಎಲ್ಲ ಸಮಾಜದವರು ಒಂದಾಗಿ ಜೀವಿಸುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಚಿವರು ಹೇಳಿದರು.
2013ರಲ್ಲಿ ಪ್ರವಾಹ ಅಪ್ಪಳಿಸಿದಾಗ ಭೀಮಶಿಲೆ ಬಂದು ಪ್ರವಾಹದಿಂದ ಕೇದಾರನಾಥ ದೇವಾಲಯಕ್ಕೆ ರಕ್ಷಣೆ ನೀಡಿದ ಘಟನೆ ದೇವರ ಶಕ್ತಿಗೆ ನಿದರ್ಶನವಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಕೇದಾರನಾಥಕ್ಕೆ ಹೋಗಿ ಪುಣ್ಣಕಟ್ಟಿಕೊಳ್ಳಿ ಎಂದು ಸಚಿವರು ಜನರಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಶ್ರೀ ಭೀಮಾಶಂಕರಲಿಂಗ ಮಹಾಸ್ವಾಮಿಗಳು, ರಂಭಾಪುರಿ ಶ್ರೀಗಳು, ಗುಬ್ಬಿ ಶ್ರೀಗಳು, ಉಮೇಶ್ವರ ಶಿವಾಚಾರ್ಯರು, ಶಿವಮಹಾಂತ ಸ್ವಾಮಿಗಳು, ಶಿವಮೂರ್ತಿಯ ಸ್ವಾಮಿಗಳು, ಬಡೇಕೊಳ್ಳಿಮಠದ ನಾಗೇಂದ್ರ ಸ್ವಾಮಿಗಳು ಜಗದ್ಗುರುಗಳು, ಕೇದಾರ ಜಗದ್ಗುರುಗಳು, ಶಾಂತಲಿಂಗ ಮಹಾರಾಜರು, ಮುತ್ನಾಳದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಗ್ರಾಮದ ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ