Belagavi NewsBelgaum NewsKannada NewsKarnataka News

*ನಾವಗೆ ಬೆಂಕಿ ಅವಘಡದಲ್ಲಿ ಓರ್ವ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಹೊರವಲಯದಲ್ಲಿರುವ ಸ್ನೇಹಂ  ಇನ್ಸುಲಿನ್ ಟೇಪ್ ಉತ್ಪಾದನಾ ಕಾರ್ಖಾಗೆ ಬೆಂಕಿ ತಗುಲಿದ ಪರಿಣಾಮ ಮೂವರು ಕಾರ್ಮಿಕರಿಗೆ ಸುಟ್ಟು ಗಂಭೀರವಾಗಿ ಗಾಯವಾಗಿದ್ದು ಅವರನ್ನು ಬುಧವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಾರುತಿ ಕರವೇಕರ (32), ಯಲ್ಲಪ್ಪ ಸಲಗುಡೆ (35), ರಂಜಿತ್ ಪಾಟೀಲ್ (39) ಗಂಭೀರವಾಗಿ ಗಾಯಗೊಂಡವರು. ಇನ್ನೂ ಹಲವರು ಸಿಲುಕಿರುವ ಮಾಹಿತಿ ಇದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. 

ಲಿಫ್ಟ್ ನಲ್ಲಿ ಕಾರ್ಮಿಕ, ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ಮೆಟಲ್ ಕಟರ್ ನಿಂದ ಡಿ ಆರ್ ಎಫ್  ಹಾಗೂ ಅಗ್ನಿಶಾಮಕ ದಳದ ಸಿಬ್ಬಂಧಿ ಲಿಫ್ಟ್ ಕೊರೆದು ಹೊರ ತೆಗೆದಿದ್ದಾರೆ.

Home add -Advt

ಲಿಫ್ಟ್ ನಲ್ಲಿ ಯಲ್ಲಪ್ಪ(18) ಸಿಲುಕಿ ಮೃತ ಪಟ್ಟಿದ್ದಾನೆ. ಮೆಟಲ್ ಕಟರ್ ಮೂಲಕ ಲಿಫ್ಟ್ ಬಾಗಿಗಲುಗಳನ್ನು ಕಟ್ ಮಾಡಲಾಗಿದೆ. ಸತತ 15 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ.

Related Articles

Back to top button