2019 ರ ಕೊನೆಯಲ್ಲಿ ಭಾರತ ಮತ್ತು ಪಾಕ್ ನಡುವೆ ಯುದ್ಧ
ಪ್ರಗತಿವಾಹಿನಿ ಸುದ್ದಿ, ನವದೆಹಲಿ :
‘ಯುದ್ಧ‘ ಅನಿವಾರ್ಯವಾದರೆ ಎಲ್ಲದಕ್ಕೂ ಸಿದ್ದ ಎಂದು ಭಾರತಕ್ಕೆ ಪದೇ ಪದೇ ಪರೋಕ್ಷವಾಗಿ ಎಚ್ಚರಿಕೆ ನೀಡಿರುವ ಪಾಕಿಸ್ತಾನ ಶೀಘ್ರದಲ್ಲೇ ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ಬುಧವಾರ ‘ನೋಟುಮ್’ (ವಾಯುಪಡೆಗೆ ಸೂಚನೆ) ಮತ್ತು ನೌಕಾ ಎಚ್ಚರಿಕೆ ನೀಡುವ ಮೂಲಕ ಕ್ಷಿಪಣಿ ಪರೀಕ್ಷೆಯ ಚಿಹ್ನೆಗಳನ್ನು ಬಿಡುಗಡೆ ಮಾಡಿದ್ದಾರೆ.
ಕರಾಚಿ ಸಮೀಪದ ಸೊನ್ಮಿಯಾನಿ ಪರೀಕ್ಷಾ ಕೇಂದ್ರದಿಂದ ಈ ಕ್ಷಿಪಣಿಯನ್ನು ಉಡಾಯಿಸುವ ಸಾಧ್ಯತೆಯಿದೆ. ಈ ತಿಂಗಳ 28 ಮತ್ತು 31 ರಂದು ಮಿಲಿಟರಿ ತಂತ್ರಗಳು ನಡೆಯಲಿವೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಕಾಶ್ಮೀರ ವಿಚಾರದಲ್ಲಿ ಯಾವಾಗಲಾದರೂ ಭಾರತದ ಮೇಲೆ ಯುದ್ಧ ಪ್ರಾರಂಭವಾಗಬಹುದು ಎಂದಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ರವರ ಹೇಳಿಕೆಯನ್ನು, ಪಾಕಿಸ್ತಾನ ರೈಲ್ವೆ ಸಚಿವ ಶೇಖ್ ರಶೀದ್ ಅವರು ರಾವಲ್ಪಿಂಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದ್ದಾರೆ.
ಪಾಕಿಸ್ತಾನ ಮತ್ತು ಭಾರತ ನಡುವಿನ ಯುದ್ಧವು 2019 ರ ಕೊನೆಯಲ್ಲಿ ನಡೆಯಬಹುದು, ಬಹುಶಃ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಗಬಹುದು ಎಂದು ಶೇಖ್ ರಶೀದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. (ಪ್ರಗತಿವಾಹಿನಿ ಸುದ್ದಿ)////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ