National

*3 ಗಂಟೆಗಳಲ್ಲಿ ಪಾಕ್ ನ 11 ವಾಯು ನೆಲೆ ಧ್ವಂಸ: ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸಿದ್ಧ: ಭಾರತೀಯ ಸೇನೆ*

ಪ್ರಗತಿವಾಹಿನಿ ಸುದ್ದಿ: ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ನಮ್ಮ ಎಲ್ಲಾ ಸೈನಿಕ ನೆಲೆಗಳು ಹಗಊ ಉಪಕರಣಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಡಿಜಿಎಂಒ ರಾಜೀವ್ ಘಾಯ್ ತಿಳಿಸಿದ್ದಾರೆ.

Home add -Advt

ಮೂರು ಸೇನೆಯ ಸೇನಾಧಿಕಾರಿಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಸೇನೆ ನಮ್ಮ ವಾಯುನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡಿದರೂ ನಮ ವಾಯು ರಕ್ಷಣಾ ಗ್ರಿಡ್ ಮುಂದೆ ಅವರು ವಿಫಲರಾಗಿದ್ದಾರೆ. ನಮ್ಮ ವಾಯು ರಕ್ಷಣೆ ಎಷ್ಟು ಬಲಿಷ್ಠವಾಗಿದೆಯೆಂದರೆ ಪಾಕಿಸ್ತಾನಕ್ಕೆ ಯಾವುದೇ ಅವಕಾಶವಿಲ್ಲ ಎಂದರು.

ಮಿಗ್ 29 ಯುದ್ಧ ವಿಮಾನವನ್ನು ನಿಯೋಜಿಸಲಾಗಿದೆ. ನಾವು ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ಮಾಡುವುದಿಲ್ಲ. ನಮ್ಮ ಹೋರಾಟ ಉಗ್ರರ ವಿರುದ್ಧ ಅಷ್ಟೇ. ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಮೇ 7ರಂದು ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿದ್ದೇವೆ. ಪಾಕ್ ನಲ್ಲಿ ಉಗ್ರರ ನೆಲೆ ನಾಶಕ್ಕೆ ಸ್ವದೇಶಿ ನಿರ್ಮಿತ ಕ್ಷಿಪಣಿ ಬಳಸಲಾಗಿದೆ. 3 ಗಂಟೆಗಳಲ್ಲಿ ಪಾಕಿಸ್ತಾನದ 11 ವಾಯು ನೆಲೆಗಳನ್ನು ಧ್ವಂಸ ಗೊಳಿಸಲಾಗಿದೆ ಎಂದರು.

ಪಾಕಿಸ್ತಾನದ ಕಿರಾನಾ ಬೆಟ್ಟ, ಪರಮಾಣು ಕೇಂದ್ರದ ಮೇಲೆ ನಾವು ದಾಳಿ ನಡೆಸಿಲ್ಲ. ಅಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇವೆ. ಪಾಕ್ ಸೇನಾ ನೆಲೆಗಳನ್ನು ದ್ವಂಸಗೊಳಿಸಲಾಗಿದೆ ಎಂದು ಹೇಳಿದರು. ಇದೇವೇಳೆ ಸಾಕ್ಷ್ಯ ವಿಡಿಯೋಗಳನ್ನು ತೋರಿಸಿದರು.


Related Articles

Back to top button