https://youtu.be/KzY-nfF0Rr8
ಬಿಳಗಿ ಶಾಸಕ ಮುರುಗೇಶ ನಿರಾಣಿ ಕುಟುಂಬ ಸಮೇತ ದೀಪಬೆಳಗಿದರು.
ಪ್ರಗತಿವಾಹಿನಿ ಸುದ್ದಿ – ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಭಾನುವಾರ ರಾತ್ರಿ ಇಡೀ ಭಾರತ ದೀಪದಲ್ಲಿ ಒಂದಾಯಿತು. ಇಡೀ ದೇಶದ ಜನರು ರಾತ್ರಿ 9 ಗಂಟೆಗೆ ಮನೆಗಳ ಲೈಟ್ ಆರಿಸಿ ದೀಪದಲ್ಲಿ ದೇಶವನ್ನು ಬೆಳಗಿದರು.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಜನರು ಮನೆಯ ಮುಂದೆ, ಬಾಲ್ಕನಿಗಳಲ್ಲಿ ದೀಪ ಹಿಡಿದು ಪ್ರಧಾನಿ ಕರೆಗೆ ಸ್ಪಂದಿಸಿದರು. ಎಲ್ಲೆಡೆ ಭಾರತ ಮಾತಾಕಿ ಜೈ, ವಂದೇ ಮಾತರಂ ಘೋಷಣೆಗಳು ಕೇಳಿಬಂದವು.
ಬೀದಿ ದೀಪಗಳು, ವಿದ್ಯುತ್ ಪರಿಕರಗಳನ್ನು ಹೊರತುಪಡಿಸಿ ಎಲ್ಲೆಡೆ ಲೈಟ್ಗಳನ್ನು ಆರಿಸಲಾಗಿತ್ತು. ಮಹಾನಗರಗಳ ದೃಷ್ಯ ದೀಪದ ಬೆಳಕಿನಲ್ಲಿ ಅತ್ಯದ್ಭುತವಾಗಿ ಕಾಣಿಸಿತು. ಕೊರೋನಾ ವಿರುದ್ಧ ಹೋರಾಡುವ ಛಲದೊಂದಿಗೆ ಎಲ್ಲರೂ ದೀಪ ಬೆಳಗಿದರು.
ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ದೀಪ ಪ್ರದರ್ಶಿಸಲಾಯಿತು. ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಡಾ.ರಾಜೇಂದ್ರ ಕೆ.ವಿ., ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಹಾಗೂ ರಾಜ್ಯದ ಸಚಿವರು ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು, ಗಣ್ಯರು ಸಹ ದೀಪ ಬೆಳಗಿಸಿ ಕೊರೋನಾ ವಿರುದ್ಧದ ಹೋರಾಟಕ್ಕೆ ಪಣತೊಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ