Latest

ಭೀಕರ ಭೂಕಂಪ; 40ಕ್ಕೂ ಹೆಚ್ಚು ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಜಕಾರ್ತ್: ಇಂಡೋನೇಷ್ಯಾದ ಜಾವಾದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭೀಕರ ಭೂಕಂಪದಲ್ಲಿ ಬೃಹತ್ ಕಟ್ಟಡಗಳು ನೆಲಸಮವಾಗಿದ್ದು, ಅವಶೇಷಗಳಡಿ ಸಿಲುಕಿ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಜಕಾರ್ತ್ ನ ದಕ್ಷಿಣ ಆಗ್ನೇಯ ಭಾಗದ 75 ಕಿ.ಮೀ ವರೆಗೆ ಭೂಕಂಪ ಸಂಭವಿಸಿದೆ. ಆರಂಭದ 10 ಕೀ.ಮೀ ವ್ಯಾಪ್ತಿಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.6ರಷ್ಟು ದಾಖಲಾಗಿದೆ. ಭೂಕಂಪದಿಂದಾಗಿ ಜನರು ಕಂಗಾಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಸಾಗಿದೆ.

 

ಚಳಿ ನಡುವೆಯೇ ಮತ್ತೆ ಭಾರಿ ಮಳೆ ಎಚ್ಚರಿಕೆ

https://pragati.taskdun.com/heavy-rainkarnatakawinterimd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button