Latest

ಜೈಲಿನಲ್ಲಿ ಬೆಂಕಿ ಅವಘಡ; 41 ಕೈದಿಗಳ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಜಕಾರ್ತ: ಜೈಲಿನಲ್ಲಿ ಏಕಾಏಕಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 41 ಕೈದಿಗಳು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದಲ್ಲಿ ಸಂಭವಿಸಿದೆ.

ಕೈದಿಗಳು ಗಾಢ ನಿದ್ರೆಗೆ ಜಾರಿದ್ದ ವೇಳೆ ಜೈಲಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 41 ಕೈದಿಗಳು ಸಜೀವ ದಹನಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸಿವೆ. ಆದರೆ ಅಷ್ಟರಲ್ಲಿ ಜೈಲಿನ ಬಹುತೇಕ ಭಾಗಗಳು ಬೆಂಕಿಗಾಹುತಿಯಾಗಿದೆ.

ಘಟನೆಯಲ್ಲಿ 72 ಕೈದಿಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿದೆ ಎನ್ನಲಾಗಿದೆ.
ಸೈಬರ್ ಕ್ರೈಮ್ ವಿಭಾಗವನ್ನು ಮತ್ತಷ್ಟು  ಗಟ್ಟಿಗೊಳಿಸಲಾಗುತ್ತಿದೆ -ಅರಗ ಜ್ಞಾನೇಂದ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button