ಪ್ರಗತಿವಾಹಿನಿ ಸುದ್ದಿ; ಇಂಡೋನೇಷ್ಯಾ: ಇತ್ತೀಚಿನ ದಿನಗಳಲ್ಲಿ ವಿಭಿನ್ನವಾಗಿ ವಿವಾಹವಾಗುವ ಉದ್ದೇಶಕ್ಕೆ ವಧು-ವರರು ನೀರಿನಲ್ಲಿ, ಆಗಸದಲ್ಲಿ, ವಿಮಾನಗಳಲ್ಲಿ, ಜೋಕಾಲಿಯಲ್ಲಿ ತೇಲಾಡುತ್ತಾ ಹೀಗೆ ಸ್ಪೆಷಲ್ ಆಗಿ ವಿವಾಗುತ್ತಿರುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಸಾಮಿ ಅನ್ನ ಮಾಡುವ ಕುಕ್ಕರನ್ನೇ ವಿವಾಹವಾಗಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ತಮಾಷೆ ಎನಿಸಿದರೂ ಇದು ನಿಜ. ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ರೈಸ್ ಕುಕ್ಕರನ್ನು ಮದುವೆಯಾಗಿದ್ದು, ನೀ ಇಲ್ಲದೇ ಅನ್ನ ಅಪೂರ್ಣ ಎಂದು ಭಾವನಾತ್ಮಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿದ್ದಾನೆ. ಹೀಗೆ ಕುಕ್ಕರನ್ನು ಮದುವೆಯಾದ ನಾಲ್ಕೇ ದಿನಕ್ಕೆ ವಿಚ್ಛೇದನವನ್ನೂ ನೀಡಿದ್ದಾನೆ ಭೂಪ.
ಇಂಡೋನೇಷ್ಯಾದ ಯುವಕ ಕಹಿರೋಲ್ ಆನಂ ಉದ್ಯೋಗಕ್ಕಾಗಿ ಮನೆಯಿಂದ ಬೇರೆ ಊರಿನಲ್ಲಿ ವಾಸವಾಗಿದ್ದ. ಮನೆ ಸಾಮಾನು ಖರೀದಿ ವೇಳೆ ತುಂಬಾ ಇಷ್ಟಪಟ್ಟು ರೈಸ್ ಕುಕ್ಕರ್ ಖರೀದಿಸಿದ್ದು, ಆಧುನಿಕ ಶೈಲಿಯ ಈ ಕುಕ್ಕರ್ ಆತನಿಗೆ ತುಂಬಾ ಪ್ರಿಯವಾಗಿತ್ತು. ಕುಕ್ಕರ್ ಮೇಲಿನ ಅತಿಯಾದ ಪ್ರೀತಿಯಿಂದ ರಿಜಿಸ್ಟರ್ ಆಫೀಸಿನಲ್ಲಿ ನೋಂದಾಯಿಸಿ, ಆ ಕುಕ್ಕರನ್ನೇ ವಧುವಿನಂತೆ ಅಲಂಕರಿಸಿ ವಿವಾಹವಾಗಿದ್ದಾನೆ.
ನನ್ನ ಮಡದಿ ಬಿಳಿಯಿದ್ದಾಳೆ, ತುಂಬಾ ಚೆನ್ನಾಗಿದ್ದಾಳೆ, ಬಹಳ ಚೆನ್ನಾಗಿ ಅನ್ನ ಮಾಡುತ್ತಾಳೆ. ಹೆಚ್ಚು ಮಾತನಾಡುವುದಿಲ್ಲ, ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಾಳೆ. ನನ್ನ ಕನಸಿನ ಹುಡುಗಿಯಂತೆಯೇ ಇದ್ದಾಳೆ. ಹಾಗಾಗಿ ಕುಕ್ಕರ್ ವಿವಾಹವಾಗಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾನೆ. ಅದಾದ ನಾಲ್ಕೇ ದಿನಕ್ಕೆ ಮತ್ತೊಂದು ಪೋಸ್ಟ್ ಹಾಕಿ ಇಷ್ಟಪಟ್ಟು ಮದುವೆಯಾದ ಕುಕ್ಕರ್ ಗೆ ವಿಚ್ಛೇದನ ನೀಡಿದ್ದೇನೆ. ನನ್ನ ಹೆಂಡತಿ ನಾನು ಹೇಳಿದ್ದನ್ನೆಲ್ಲ ಕೇಳುತ್ತಾಳೆ, ನೋಡಲು ಚನ್ನಾಗಿದ್ದಾಳೆ ಎಲ್ಲವೂ ನಿಜ. ಆದರೆ ಆಕೆಗೆ ಅನ್ನದ ವಿನ: ಬೇರೆನೂ ಅಡುಗೆ ಮಾಡಲು ಬರುವುದಿಲ್ಲ. ಆಕೆ ಅನ್ನ ಚನ್ನಾಗಿ ಮಾಡುವುದನ್ನು ಕಂಡು ಮರುಳಾಗಿ ಮದುವೆಯಾಗಿ ಮೋಸ ಹೋದೆ ಎಂದು ಬರೆದುಕೊಂಡಿದ್ದಾನೆ.
ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ