Latest

ವಾರ್ತಾ ಇಲಾಖೆ ಅಧಿಕಾರಿ ಕೊರೊನಾಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ತುಮಕೂರು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ್ ಬಲಿಯಾಗಿದ್ದಾರೆ.

ಅವರು ಉಸಿರಾಟದ ಸಮಸ್ಯೆಯಿಂದ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.

Related Articles

2015ರಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದ ಮಂಜುನಾಥ್ ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಕಳೆದ ವಾರ ಮಂಜುನಾಥ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮೃತಪಟ್ಟಿದ್ದಾರೆ.

Home add -Advt
ಮೂಲತಃ ದೊಡ್ಡಬಳ್ಳಾಪುರದ ನೆಲ್ಲುಕುಂಟೆ ಗ್ರಾಮದ ಮಂಜುನಾಥ್ ಅವರು ಕಳೆದ ಐದು ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಈ ಹಿಂದೆ ಸಹಕಾರ ಇಲಾಖೆ ಹಾಗೂ ಪತ್ರಿಕೋದ್ಯಮದಲ್ಲಿಯೂ ಸೇವೆ ಸಲ್ಲಿಸಿದ್ದರು.
ಇವರು ಪತ್ನಿ , ಒಂದು ವರ್ಷದ ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ವಾರ್ತಾ ಸಚಿವ ಸಿ.ಸಿ. ಪಾಟೀಲ್ ಅವರು ಮಂಜುನಾಥ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ  ಪರ್ವೇಜ್ ಅವರು ಸ್ನೇಹ ಜೀವಿ ಮಂಜುನಾಥ್ ಒಬ್ಬ ಉತ್ತಮ ಅಧಿಕಾರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ ಪಿ.ಎಸ್.ಹರ್ಷ ಅವರು ನಮ್ಮೆಲ್ಲಾ ಪ್ರಯತ್ನಗಳೂ ಕೂಡಾ ಮಂಜುನಾಥ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

ಸಿದ್ರಾಮಪ್ಪ ಇಟ್ಟಿ ಕೊರೋನಾಕ್ಕೆ ಬಲಿ
10 ಕೆಜಿ ಅಕ್ಕಿ, 10,000 ರೂ ಆರ್ಥಿಕನೆರವು ನೀಡಿ

Related Articles

Back to top button