Kannada NewsKarnataka News

ಜಿಲ್ಲೆಯ ರೈತರಿಗೆ  ತೊಂದರೆಯಾಗದಂತೆ ಕ್ರಮವಹಿಸಲು ಸೂಚನೆ -ಕಾರ್ಮಿಕರಿಗೆ ಸಹಾಯಧನ: ವಿವರ ಸಲ್ಲಿಸಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು, ಖರೀದಿದಾರರನ್ನು ಗುರುತಿಸಲು ಹಾಗೂ ಕೃಷಿ ಚಟುವಟಿಕೆಗಳು ನಿರಂತರವಾಗಿ ಕೈಗೊಳ್ಳಲು ತೊಂದರೆಯಾಗದಂತೆ ಕ್ರಮವಹಿಸಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕೃಷಿ ಮಾರುಕಟ್ಟೆ, ಕೆ.ಎಮ್.ಎಫ್ ಹಾಗೂ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಗುರುವಾರ (ಏಪ್ರಿಲ್.೦೨) ವಿಡಿಯೋ ಸಂವಾದ ನಡೆಸಿ, ಜಿಲ್ಲೆಯ ರೈತರಿಗೆ ಮುಂಬರುವ ದಿನಗಳಲ್ಲಿ ಕೃಷಿ ಮಾಡಲು ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಅವರು ಸೂಚನೆ ನೀಡಿದರು.
ಗ್ರಾಮವಾರು ಟಾಸ್ಕಫೋರ್ಸ್‌ಗಳನ್ನು ರಚನೆ ಮಾಡಿ, ರೈತರು ಬೆಳೆದ ಮಾಹಿತಿಯನ್ನು ಕ್ರೊಢೀಕರಿಸುವುದು, ರೈತರು ಬೆಳೆದ ಬೆಳೆಗಳಿಗೆ ಸ್ಥಳೀಯವಾಗಿ ವಾಹನದ ಮುಖಾಂತರ ರೈತರೇ ನೇರವಾಗಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸುವುದು, ಕೃಷಿ ಮಾರುಕಟ್ಟೆಯಲ್ಲಿ ಬರುವ ವಿವಿಧ ಉತ್ಪನ್ನಗಳ ಆವಕ ಮತ್ತು ಜಾವಕಗಳನ್ನು ಖರೀದಿದಾರರ ಮುಖಾಂತರ ಸಮರ್ಪಕವಾಗಿ ನಿರ್ವಹಿಸಲು ಹೇಳಿದರು.
ತೋಟಗಾರಿಕೆ ಉತ್ಪನ್ನಗಳ ಪ್ರಮಾಣವನ್ನು ಗುರುತಿಸುವುದು ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಅನುಕೂಲ ಮಾಡಿಕೊಡುವುದು, ಮುಂಬರುವ ದಿನಗಳಲ್ಲಿ ತೋಟಗಾರಿಕೆ ಸಸಿಗಳು ಕೊರತೆಯಾಗದಂತೆ ಜಿಲ್ಲೆಯ ಎಲ್ಲ ನರ್ಸರಿಗಳಲ್ಲಿ ಬೇಡಿಕೆಗೆ ತಕ್ಕಂತೆ ಸಸಿ ತಯಾರಿಸಿ, ಮಾರಾಟ ಮಾಡಲು ತಿಳಿಸುವುದು ಹಾಗೂ ಗ್ರಾಮ ಪಂಚಾಯತ್‌ವಾರು ಮುಂಬರುವ ದಿನಗಳಲ್ಲಿ ಒಟ್ಟು ಉತ್ಪನ್ನಗಳ ಮಾಹಿತಿ ಕ್ರೊಢೀಕರಿಸಬೇಕು ಎಂದರು.
ಕೃಷಿ ಇಲಾಖೆಯಿಂದ ನಡೆಸುತ್ತಿರುವ ಕೃಷಿ ಯಂತ್ರಧಾರೆ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡುವುದು ಹಾಗೂ ಬೀಜ ರಸಗೊಬ್ಬರ, ಸಸ್ಯ ಸಂರಕ್ಷಣಾ ಜೌಷಧಿಗಳು ರೈತರಿಗೆ ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಪಶು ಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಉತ್ಪಾದಿಸುವ ಹಾಲನ್ನು ಕೆ.ಎಮ್.ಎಫ್ ಡೇರಿ ಮುಖಾಂತರ ಮಾರಾಟ ಮಾಡಲು ಕ್ರಮವಹಿಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಕೆ.ವಿ ಅವರು ಹೇಳಿದರು.

 

ಕಾರ್ಮಿಕರಿಗೆ ಸಹಾಯಧನ: ಬ್ಯಾಂಕ್ ವಿವರ ಸಲ್ಲಿಸಲು ಸೂಚನೆ

ಕೋರೋನ ವೈರಸ್ ಹರುಡುತ್ತಿರುವ ಹಿನ್ನೆಲೆಯಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ರೂ.೧,೦೦೦/-ಗಳ ಸಹಾಯ ಧನ ಬಿಡುಗಡೆಗಾಗಿ ಕಾರ್ಮಿಕರ ಬ್ಯಾಂಕ್ ಖಾತೆಯ ವಿವರವನ್ನು ಸಲ್ಲಿಸುವಂತೆ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ವೈರಸ್ ಎಲ್ಲಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರವು ದಿನಾಂಕ: ೨೫/೦೩/೨೦೨೦ ರಂದು ರಾಜ್ಯಾದ್ಯಾಂತ ಲಾಕಡೌನ್ ಘೋಷಿಸಿರುವುದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳು ಸ್ಥಗಿತ ಗೊಂಡಿದ್ದು, ಇಲ್ಲಿ ಕೆಲಸ ನಿರ್ವಹಿಸುವ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕೆಲಸ ನಿರ್ವಹಿಸಲು ಸಾಧ್ಯವಾಗದಿವುದರಿಂದ ಅವರ ಅವಶ್ಯಕ ನಿರ್ವಹಣೆಗಾಗಿ ರೂ.೧,೦೦೦/- ಗಳ ಸಹಾಯ ಧನ ನೀಡುವಂತೆ  ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ.
ಬೆಳಗಾವಿ ಜಿಲ್ಲೆಯಲ್ಲಿ ೨೦೦೭ ರಿಂದ ೨೦೧೬ ವರಗೆ ನೋಂದಣಿಯಾದ ಕಾರ್ಮಿಕರಲ್ಲಿ ಈ ಕಛೇರಿಯಲ್ಲಿ ಲಭ್ಯವಿರುವ ಸುಮಾರು ೧೬,೯೦೦ ಫಲಾನುಭವಿಗಳ ಖಾತೆ ರೂ. ೧,೦೦೦/- ಗಳ ಜಮೆ ಮಾಡಲು ಕೆನರಾ ಬ್ಯಾಂಕ ಬೆಂಗಳೂರು ಇವರಿಗೆ ಸಲ್ಲಿಸಲಾಗಿರುತ್ತದೆ.

ಬಾಕಿ ಉಳಿದ ಫಲಾನುಭವಿಗಳು ತಾವು ನೋಂದಣಿಯಾದ ತಾಲೂಕ ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೧ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ ೯೪೪೮೬೯೩೫೫೩, ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೨ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ: ೯೪೮೨೨೧೪೫೪೦, ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೩ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ: ೯೪೪೮೭೭೬೩೬೬, ಹಿರಿಯ ಕಾರ್ಮಿಕ ನಿರೀಕ್ಷಕರವರ ಕಛೇರಿ ೪ನೇ ವೃತ್ತ ಬೆಳಗಾವಿ ರವರ ದೂರವಾಣಿ ಸಂಖ್ಯೆ: ೯೯೪೫೪೮೬೬೮೯.
ಕಾರ್ಮಿಕ ನಿರೀಕ್ಷಕರವರ ಬೈಲಹೊಂಗಲ ಮತ್ತು ಖಾನಾಪೂರ ವೃತ್ತ ರವರ ದೂರವಾಣಿ ಸಂಖ್ಯೆ: ೯೯೦೧೧೯೮೮೦೪, ಕಾರ್ಮಿಕ ನಿರೀಕ್ಷಕರವರ ಸವದತ್ತಿ ಮತ್ತು ರಾಮದುರ್ಗ ವೃತ್ತ ರವರ ದೂರವಾಣಿ ಸಂಖ್ಯೆ: ೭೦೨೨೦೫೪೦೯೪, ಕಾರ್ಮಿಕ ನಿರೀಕ್ಷಕರವರ ಗೋಕಾಕ ಮತ್ತು ರಾಯಭಾಗ ವೃತ್ತ ರವರ ದೂರವಾಣಿ ಸಂಖ್ಯೆ: ೯೮೪೫೨೫೧೫೪೫.
ಕಾರ್ಮಿಕ ನಿರೀಕ್ಷಕರವರ ಚಿಕ್ಕೋಡಿ, ಹುಕ್ಕೇರಿ ಮತ್ತು ನಿಪ್ಪಾಣಿ ವೃತ್ತ ರವರ ದೂರವಾಣಿ ಸಂಖ್ಯೆ: ೯೯೦೦೪೨೮೭೬೦, ಕಾರ್ಮಿಕ ನಿರೀಕ್ಷಕರವರ ಅಥಣಿ ವೃತ್ತ ರವರ ದೂರವಾಣಿ ಸಂಖ್ಯೆ: ೯೭೪೩೫೦೮೨೯೫.
ಈ ದೂರವಾಣಿ ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ತಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಫಲಾನುಭವಿಯ ನೋಂದಣಿ ಗುರುತಿನ ಚೀಟಿ ಸಲ್ಲಿಸಲು ಸೂಚಿಸಲಾಗಿದೆ.
ನೋಂದಾಯಿತ ಕಾರ್ಮಿಕ ಸಂಘದ ಪದಾಧಿಕಾರಿಗಳು ತಮ್ಮ ಸಂಘಟಣೆಯಿಂದ ನೋಂದಾಯಿಸಿದ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳನ್ನು ಲಿಸ್ಟ್ ಮಾಡಿ ಸಂಬಂಧಪಟ್ಟ ಹಿರಿಯ ಕಾರ್ಮಿಕ ನಿರೀಕ್ಷಕರ/ ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಸಲ್ಲಿಸಬೇಕು ಎಂದು ಬೆಳಗಾವಿ ಉಪ ವಿಭಾಗ -೧ ಮತ್ತು ಉಪ ವಿಭಾಗ-೨ರ ಕಾರ್ಮಿಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button