Kannada NewsLatest

ಜೊಲ್ಲೆ ಉದ್ಯೋಗ ಸಮೂಹದಿಂದ ರಂಗೋಲಿ ಹಾಗೂ ಸ್ಥಬ್ದ ಚಿತ್ರ ಸ್ಪರ್ಧೆ; ಭಾಗವಹಿಸುವವರಿಗೆಲ್ಲ ನಗದು ಬಹುಮಾನ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಶಿವ ಬಸವ ಜಯಂತಿ ನಿಮಿತ್ತ ಮೇ 7 ರಂದು ಮುಂಜಾನೆ 8  ಗಂಟೆಗೆ ಜೊಲ್ಲೆ ಉದ್ಯೋಗ ಸಮೂಹ ವತಿಯಿಂದ ಭವ್ಯ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿ ಸ್ಪರ್ಧಿಗಳಿಗೂ ನಗದು ಬಹುಮಾನ ನೀಡಲಾಗುವುದು ಎಂದು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಸ್ಪರ್ಧಿಗೆ 1000 ರೂ. ನೀಡಲಾಗುವುದು. ಪ್ರಥಮ ಬಹುಮಾನ 5000/- ಎರಡನೇ ಬಹುಮಾನ 3000/- ತೃತೀಯ ಬಹುಮಾನ 2000/-

ಹೆಸರು ನೋಂದಾಯಿಸಲು ಕೊನೆಯ ದಿನಾಂಕ 06-05-22 , ಸಾಯಂಕಾಲ 5 ಗಂಟೆಗೆ ವರೆಗೆ ನಿಪ್ಪಾಣಿ ಬಿ.ಜೆ.ಪಿ ಕಚೇರಿಯಲ್ಲಿ ಹೆಸರನ್ನು ನೊಂದಾಯಿಸಬಹುದು.

ಇನ್ನು ಭವ್ಯ ಸ್ಥಬ್ದ ಚಿತ್ರಣ ಸರ್ಧೆ – ಜೊಲ್ಲೆ ಉದ್ಯೋಗ ಸಮೂಹ ವತಿಯಿಂದ ಭವ್ಯ ಸ್ಥಬ್ದ ಚಿತ್ರಣ ಸ್ಪರ್ಧೆಯನ್ನು ಮೇ 7 ರಂದು ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಸಾಯಂಕಾಲ 4 ಗಂಟೆಗೆ ಏರ್ಪಡಿಸಲಾಗಿದೆ. ಭಾಗವಹಿಸುವ ಪ್ರತಿ ಸ್ಪರ್ಧಿಗೆ 5000 ರೂ ನೀಡಲಾಗುವುದು.
ಪ್ರಥಮ ಬಹುಮಾನ 30,000/-
ಎರಡನೇ ಬಹುಮಾನ 25,000/-
ತೃತೀಯ ಬಹುಮಾನ 21,000/-
ದಿನಾಂಕ 06-05-22 ರಂದು ಸಾಯಂಕಾಲ 5 ಗಂಟೆಯೊಳಗೆ ನಿಪ್ಪಾಣಿ ಬಿ.ಜೆ.ಪಿ ಕಚೇರಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಎಂದು ಬಸವಜ್ಯೋತಿ ಯೂಥ್ ಫೌಂಡೇಶನ್ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ತಿಳಿಸಿದ್ದಾರೆ.

Home add -Advt

ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೆ ಪುಣೆಯಲ್ಲಿ ಆಶ್ರಯ ನೀಡಿದ್ದೇ ಕಾಂಗ್ರೆಸ್ ನಾಯಕರು -ಗೃಹ ಸಚಿವ ಅರಗ ಜ್ಞಾನೆಂದ್ರ ಆರೋಪ

Related Articles

Back to top button