Latest

ಯೋಗಾಸನ ಮಾಡಿದ ಸ್ವರ್ಣವಲ್ಲೀ ಶ್ರೀ (ವಿಡೀಯೋ ನೋಡಿ)

 

ಪ್ರಗತಿವಾಹಿನಿ Like ಮಾಡಿ, Subscribe ಮಾಡಿ, Share ಮಾಡಿ

https://youtube.com/shorts/mm7OOCJmo4c?feature=share

ಪ್ರಗತಿವಾಹಿನಿ ಸುದ್ದಿ; ಶಿರಸಿ: ಜೀವನದ ಸಮತೆ ಪಡೆಯಲು ಯೋಗಾನುಷ್ಠಾನ ಮಹತ್ವದ್ದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪೀಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.

ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಯೋಗಾನುಷ್ಠಾನ ನಡೆಸಿ ಆಶೀರ್ವಚನ ನುಡಿದ ಅವರು, ಆಸನ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ. ಆದರೆ ಯೋಗ ದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಆಗದು. ಜೀವನದಲ್ಲಿ ನಿರಂತರ ಯೋಗ ಅನುಷ್ಠಾನ ಮಾಡಬೇಕು. ಆಸನ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಪ್ರತಿದಿನವೂ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ಯೋಗದ ದಿನಾಚರಣೆಯಿಂದ ಎಲ್ಲರೂ ಆರೋಗ್ಯ ಪಡೆಯುವಂತಾಗಲಿ. ಯೋಗದ ಮೂಲಕ ವಿಶ್ವ ಒಂದಾಗಲಿ ಎಂದು ಹೇಳಿದರು.

ವಿಶ್ವ ಯೋಗ ದಿನಾಚರಣೆ ಎಲ್ಲ ಜನರಲ್ಲೂ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವಿಶ್ವವನ್ನು ಒಂದಾಗಿಸುತ್ತಿದೆ. ಭಗವದ್ಗೀತೆಯಲ್ಲಿ ಎರಡು ವಾಕ್ಯ ಬರುತ್ತದೆ. ಬೇರೆ ಸಂದರ್ಭದಲ್ಲಿನ ಸಾಲಾದರೂ ಯೋಗಕ್ಕೂ ಅದನ್ನು ಜೋಡಿಸಿಕೊಳ್ಳಬಹುದು ಎಂದು ವಿರಿಸಿದರು. ಗೀತೆಯಲ್ಲಿ ಸಮತ್ವಂ ಯೋಗ ಉಚ್ಛತೆ ಹಾಗೂ ಯೋಗ ಕರ್ಮಸ್ಯ ಕೌಶಲಂ ಎಂಬ ಎರಡೂ ಸಾಲುಗಳು ಬೇರೆ ಬೇರೆ ಶ್ಲೋಕದ ಕೊನೇಯ ಭಾಗ. ಹಾಗಾಗಿ ಆ ಶ್ಲೋಕದಲ್ಲಿ ಅರ್ಥ ಬೇರೆ ಇದ್ದರೂ ನಾವು ಹೇಳುವ ಅರ್ಥ ವಿಭಿನ್ನ. ಸಮತ್ವಂ ಯೋಗ ಉಚ್ಛತೆ ಎಂದರೆ ಸಮತೆಯೇ ಯೋಗ. ಸಮತ್ವ ಯೋಗ. ನಮ್ಮ ಶರೀರದಲ್ಲಿ ನಮ್ಮ ಉಸಿರಾಟದಲ್ಲಿ ಸಮತ್ವ ಬರಬೇಕು. ಶರೀರದ ಸಮತ್ವ ಎಂದರೆ ನೇರವಾಗಿ ಕುಳಿತುಕೊಳ್ಳುವದು, ಆರೋಗ್ಯ ಇಟ್ಟುಕೊಳ್ಳುವದು, ಬ್ರಹ್ಮಚರ್ಯದ ನಿಯಮ ಪಾಲನೆಯು ಶರೀರದ ಸಮತ್ವ ಎಂದರು.

ಉಸುರಾಟವೂ ಒಂದು ಸಮತ್ವ. ಉಸಿರು ತೆಗೆದುಕೊಳ್ಳುವಷ್ಟೇ ಬಿಡುವದೂ ಅಷ್ಟೇ ಕಾಲ ಬೇಕು. ಪ್ರಾಣಕ್ಕೆ ಅದರದ್ದೇ ಆದ ಸಮತೆ ಇರುತದೆ. ಸಹಜು ಉಸಿರು ತೆಗೆದುಕಳ್ಳುವ ಹೆಚ್ಚು ಬಿಡಲು ಬೇಕು. ಗಾಢ ನಿದ್ದೆಯ ಸಮಸ್ಥಿತಿಯೇ ಪ್ರಾಣದ ಸಮಸ್ಥಿತಿ. ಪ್ರಾಣಾಯಾಮದ ಮೂಲಕ ಜಾಗೃತದ ವ್ಯವಸ್ಥೆಯಲ್ಲೂ ಇದನ್ನು ತರಬೇಕು. ಮನಸ್ಸಿನ ಆರೋಗ್ಯದ ಮೂಲಕ ಇದು ಸಾಧ್ಯವಿದೆ. ಆಸನ ಪ್ರಾಣಾಯಾಮದ ಮೂಲಕವೂ ಹೇಳಬಹುದು. ಇದನ್ನು ಸಾಧನೆ ಮಾಡಲು ಕೌಶಲ ಬೇಕು ಎಂದರು.

ಯೋಗ ಪ್ರಾಣಾಯಮ ತಿಳಿದು, ಮನಸ್ಸಿಟ್ಟು ಮಾಡಬೇಕು. ಒಂದೊಂದು ಆಸನ ಮಾಡುವಾಗಲೂ ನಮ್ಮ ಆಸನದ ಕಡೆ ಲಕ್ಷ್ಯ ಇರಬೇಕು. ಎಂದೂ ಶ್ರೀಗಳು ಸಲಹೆ ನೀಡಿದರು.

ಈ ವೇಳೆ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪ್ರಾಚಾರ್ಯ ನರಸಿಂಹ ಭಟ್ಟ ತಾರಿಮಕ್ಕಿ, ವಿ. ಬಾಲಿಗದ್ದೆ ಶಂಕರ ಭಟ್ಟ, ವಿ. ಉಂಚಳ್ಳಿ ಶಂಕರ ಭಟ್ಟ, ಯೋಗ ಶಿಕ್ಷಕ ವಿನಾಯಕ ಭಟ್ಟ ಕಿಚ್ಚಿಕೇರಿ ಹಾಗೂ ಪಾಠಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.

ಯೋಗ ಸಾಧಕ ಸ್ವಾಮೀಜಿ!
ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸತ್ತಿರುವ ಸ್ವರ್ಣವಲ್ಲೀ ಶ್ರೀಗಳು ಸ್ವತಃ ಯೋಗ ಸಾಧಕ ಗುರುಗಳೂ ಹೌದು. ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ಶ್ರೀಗಳು ಯೋಗಾಸನ, ಪ್ರಾಣಾಯಾಮ ಮಾಡಿ ಗಮನ ಸೆಳೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button