Kannada NewsLatest

ಯೋಗ ಮತ್ತು ಧ್ಯಾನದ ಸರಳ ಅರ್ಥ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಂತ ರಾಷ್ಟ್ರೀಯ ಯೋಗ ದಿನವನ್ನು ಪ್ರತಿವರ್ಷ ಜೂನ್ 21 ರಂದು ಆಚರಿಸಲಾಗುತ್ತದೆ. ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ಜೂನ್ 21, 2015 ರಂದು ಅಂತ ರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು.

2021 ರ ಯೋಗ ದಿನದ ವಿಷಯವಾಗಿದೆ ‘ಆರೋಗ್ಯಕ್ಕಾಗಿ ಯೋಗ- ಮನೆಯಲ್ಲಿದ್ದರೂ ಯೋಗ’ ಮಾಡುವುದು. ಕೊರೋನ ವೈರಸ್ನ ಕಾರಣ ಈ ವರ್ಷ ವಿಶ್ವಸಂಸ್ಥೆಯ ಉದ್ದೇಶವೇನೆಂದೆ ಯೋಗವನ್ನು ಎಲ್ಲರೂ ಅವಶ್ಯವಾಗಿ ಮಾಡಬೇಕು, ಆದರೆ ಮನೆಯಲ್ಲಿದ್ದುಕೊಂಡು ಮಾಡಬೇಕು, ತಮ್ಮ ಪರಿವಾರದೊಂಗಿಗೆ ಯೋಗ ಮಾಡಬೇಕು. ಅದೂ ಸಹ ದೈಹಿಕ ಅಂತರವನ್ನು ಕಾಪಾಡಿಕೊಂಡು ಯೋಗ ಮಾಡಬೇಕು.

ಯೋಗದ ಅರ್ಥ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಾ ಸಂಯಮದ ಜೀವನವನ್ನು ನಡೆಸುವುದು. ರಾಜಯೋಗದ ಅರ್ಥ ಸ್ವರಾಜ್ಯಾಧಿಕಾರಿ ಆಗುವುದು. ಅಂದರೆ ತಮ್ಮ ಸ್ಥೂಲ ಮತ್ತು ಸೂಕ್ಷ್ಮ ಕರ್ಮೇಂದ್ರಿಯಗಳಾದ ಮನಸ್ಸು, ಬುದ್ಧಿ ಮತ್ತು ಸಂಸ್ಕಾರಗಳನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು.

ರಾಷ್ಟ್ರೀಯ ಯೋಗ ದಿನದ ಉದ್ದೇಶಗಳು:
1. ಸಾಮಾನ್ಯ ಜನರಿಗೂ ಯೋಗದಿಂದಾಗುವ ಆರೋಗ್ಯದ ಲಾಭಗಳನ್ನು ಪರಿಚಯಿಸುವುದು.
2. ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದು.
3. ವಿಶ್ವಕ್ಕೆ ಶಾಂತಿಯ ಸಂದೇಶ ತಿಳಿಸುವುದು.
4. ಯೋಗದಿಂದ ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆದುಕೊಳ್ಳುವುದು.
5. ಜನರನ್ನು ಅಂತರಾಷ್ಟ್ರೀಯ ಯೋಗದಿಂದ ಪರಸ್ಪರ ಒಂದುಗೂಡಿಸುವುದು.
6. ಯೋಗದಿಂದ ಜನರನ್ನು ಪ್ರಕೃತಿಯ ಸಾನಿಧ್ಯಕ್ಕೆ ತರುವುದು.
7. ಯೋಗದಿಂದ ಜನರನ್ನು ಧ್ಯಾನ ಅಂದರೆ ಮೆಡಿಟೇಶನ್ ಮಾಡಲು ಪ್ರೇರೇಪಿಸುವುದು.
8. ಯೋಗದ ಬಹು ಆಯಾಮದ ಲಾಭದೆಡೆಗೆ ವಿಶ್ವದ ಗಮನವನ್ನು ಸೆಳೆಯುವುದು.
9. ಉತ್ತಮ ಆರೋಗ್ಯ ನಮ್ಮ ಮೂಲಭೂತ ಅಧಿಕಾರವಾಗಿದೆ. ಇದಕ್ಕಾಗಿ ನಾವು ಸ್ವಸ್ಥ ಜೀವನಶೈಲಿಯನ್ನು ಅನುಸರಿಸಬೇಕಾಗಿದೆ. ಉತ್ತಮ ಆರೋಗ್ಯವನ್ನು ಪಡೆದು ಜೀವನದ ಆನಂದ ಪಡೆಯಬೇಕೆಂಬ ಜಾಗೃತಿಯನ್ನು ಜನರಲ್ಲಿ ಮೂಡಿಸುವುದು.
10. ಯೋಗದಿಂದ ವೈಶ್ವಿಕ ಸಮನ್ವಯವನ್ನು ಬಲಗೊಳಿಸುವುದು.
11. ಯೋಗದಿಂದ ಶಾರೀರಿಕ ಮತ್ತು ಮಾನಸಿಕ ರೋಗಗಳನ್ನು ವಾಸಿ ಮಾಡುವುದು.
12. ಯೋಗದ ನಿಯಮಿತವಾದ ಅಭ್ಯಾಸದಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದು.
13. ಯೋಗಾಸನದ ನಂತರ ತಕ್ಷಣವೇ ಧ್ಯಾನವನ್ನು ಮಾಡಲಾಗುವುದು.

ಧ್ಯಾನವು ನಮ್ಮ ಮನಸ್ಸಿನ ಚಂಚಲ ವೃತ್ತಿಗಳನ್ನು ಶಾಂತಗೊಳಿಸುತ್ತದೆ. ಭಾರತದ ಈ ಧ್ಯಾನದ ಹೆಸರು ರಾಜಯೋಗವಾಗಿದೆ.

ವರ್ತಮಾನ ಸಮಯದ ದೈನಂದಿನ ಜೀವನದಲ್ಲಿ ಬಹಳ ಒತ್ತಡವಿದೆ. ಇದು ನಮ್ಮ ಮಾನಸಿಕ ಶಕ್ತಿಯನ್ನು ಕ್ಷೀಣಿಸುತ್ತದೆ. ಎಲ್ಲಿಯವರೆಗೆ ನಾವು ನಮ್ಮ ಮನಸ್ಸನ್ನು ಪರಮಾತ್ಮನೊಂದಿಗೆ ಜೋಡಿಸಿ ಕರ್ಮಯೋಗಿಯಾಗುವುದಿಲ್ಲವೋ ಅಲ್ಲಿಯವರೆಗೆ ವರ್ತಮಾನದ ವಿಕಟ ಪರಿಸ್ಥಿತಿಗಳಲ್ಲಿ ಆರೋಗ್ಯದಿಂದಿರುವುದು ಸವಾಲಿನ ಕೆಲಸವೇ ಆಗಿರುತ್ತದೆ. ಈಶ್ವರನ ಸ್ಮೃತಿಯಲ್ಲಿ ನಿಮಿತ್ಯ ಭಾವನೆಯಿಂದ ಕರ್ಮ ಮಾಡಿದರೆ ಪರಮಾತ್ಮನು ನಮಗೆ ಸುಕರ್ಮ ಮಾಡುವ ಶಕ್ತಿಯನ್ನು ನೀಡುತ್ತಾನೆ. ಆಗ ನಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ.

ಮೆಡಿಟೇಶನ್ನ ಸರಳ ಅರ್ಥ: – ವಿಚಾರಗಳನ್ನು ವ್ಯವಸ್ಥಿತಗೊಳಿಸುವುದು. ನಮ್ಮ ವಿಚಾರಗಳು ಸ್ಪಷ್ಟವಾಗಿರಬೇಕು. ಏನು ಮಾಡಬೇಕು? ಏನು ಮಾಡಬಾರದು? ಎಂಬುದು ಸ್ಪಷ್ಟವಾಗಿರಬೇಕು. ಸಕಾರಾತ್ಮಕ ವಿಚಾರಗಳನ್ನು ಬಿಟ್ಟರೆ ಇತರೆ ವ್ಯರ್ಥ ಮತ್ತು ನಕಾರಾತ್ಮಕ ವಿಚಾರಗಳು ನುಸುಳಬಾರದು. ಮೆಡಿಟೇಶನ್ ಎಂದರೆ ಒಂದು ವಿಶೇಷ ಲಕ್ಷನದೆಡೆಗೆ ಏಕಾಗ್ರವಾಗುವ ಸಾಮರ್ಥ್ಯ ಪಂಚೆದ್ರಿಯಗಳು ಮತ್ತು ಪಂಚ ವಿಕಾರಗಳು ತಮ್ಮ ಏಕಾಗ್ರತೆಯನ್ನು ಭಂಗಗೊಳಿಸಬಾರದು. ಯೋಗದ ಸರಳ ಅರ್ಥವಾಗಿದೆ – ಈಶ್ವರನೊಂದಿಗೆ ಮನಸ್ಸು ಮತ್ತು ಬುದ್ಧಿಯನ್ನು ಜೋಡಿಸುವುದು.

ಯೋಗದ ಅರ್ಥ: – ನಮ್ಮೆಲ್ಲರ ತಂದೆಯಾದ ಆ ಗಾಡ್-ಅಲ್ಲಾಹ-ಈಶ್ವರನೊಂದಿಗೆ ಮಧುರ-ಮಧುರವಾದ ಆತ್ಮಿಕ ಸಂವಾದ ಮಾಡುವುದು ಮತ್ತು ಅವನೊಂದಿಗೆ ಸರ್ವ ಸಂಬಂಧಗಳ ಅನುಭವ ಮಾಡುತ್ತಾ ಅತೀಂದ್ರಿಯ ಸುಖವನ್ನು ಪಡೆಯುವುದು.

ಮೆಡಿಟೇಶನ್ ನಮ್ಮೊಳಗಿನ ಯಾತ್ರೆಯಾಗಿದೆ. ಅದರಲ್ಲಿ ನಾವು ನಮ್ಮೊಳಗಿನ ಶಾಂತಿ, ಪ್ರೇಮ ಮತ್ತು ಖುಷಿಯ ಖಜಾನೆಗಳನ್ನು ಹುಡುಕಿಕೊಂಡು ಪಡೆದುಕೊಳ್ಳುತ್ತೇವೆ. ಈ ಪ್ರಕ್ರಿಯೆಯಲ್ಲಿ ಆತ್ಮಾನುಭೂತಿಯಾಗುತ್ತದೆ. ಪ್ರತಿಯೊಂದು ಆತ್ಮದೊಳಗೆ ಇದೇ ರೀತಿಯ ಅಮೂಲ್ಯ ಖಜಾನೆಯಿದೆ. ಇದರಿಂದ ನಾವು ಇನ್ನೊಬ್ಬ ವ್ಯಕ್ತಿಯೊಳಗಿನ ಸಕಾರಾತ್ಮಕ ಭಾವನೆಗಳೊಂದಿಗೆ ಬೆರೆಯುವ ಅನುಭವ ಮಾಡುತ್ತೇವೆ. ಈ ಆಧ್ಯಾತ್ಮಿಕ ಯಾತ್ರೆಯಿಂದಲೇ ವಿಶ್ವಬಂಧುತ್ವದ ಮಾರ್ಗವು ತೆರೆಯುತ್ತದೆ. ಏಕಾಗ್ರತೆಯ ಶಕ್ತಿಯಿಂದಲೇ ನಾವು ಪರಮಾತ್ಮನ ಸಕಾರಾತ್ಮಕ ಮತ್ತು ಪವಿತ್ರ ಶಕ್ತಿಯನ್ನು ನಮ್ಮೊಳಗೆ ಪ್ರವಾಹಿತವಾಗುವುದನ್ನು ಅನುಭವ ಮಾಡುತ್ತೇವೆ.

ಮೆಡಿಟೇಶನ್ನ ಅರ್ಥವಾಗಿದೆ ‘ಟೆನ್ಷನ್ ಇಲ್ಲದ ಅಟೆಂಷನ್’ (ಒತ್ತಡವಿಲ್ಲದೇ ಗಮನ ಕೊಡುವುದು) ಕೊಡುವುದಾಗಿದೆ. ಇದರ ಅರ್ಥ ಮನಸ್ಸನ್ನು ದಮನಿಸುವುದಲ್ಲ, ಪರಮಾತ್ಮನೊಂದಿಗೆ ನಾನು-ಆತ್ಮದ ಕನೆಕ್ಷನ್(ಸಂಪರ್ಕ) ಮಾಡಿಕೊಂಡು ಕಮ್ಯುನಿಕೇಶನ್ (ಸಂವಹನ) ಮಾಡುವುದು. ಇದರಿಂದ ಪರಮಾತ್ಮನ ಶಕ್ತಿಯು ನಾನು-ಆತ್ಮನಲ್ಲಿ ಪ್ರವಾಹಿತವಾಗುತ್ತದೆ. ನನ್ನಿಂದ ಪ್ರತಿಯೊಂದು ಕಾರ್ಯದಲ್ಲಿ ಮತ್ತು ಸಂಬಂಧ ಸಂಪರ್ಕದಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಆ ಶಕ್ತಿಯು ಪ್ರವಾಹಿತವಾಗುತ್ತದೆ.

ಬ್ರಹ್ಮಾಕುಮಾರಿಸ್ ಮೀಡಿಯಾ ವಿಂಗ್
9483937106

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button