Belagavi NewsBelgaum NewsKannada NewsKarnataka News

ಗುತ್ತಿಗೆ ಆಧಾರದ ತಜ್ಞ ವೈದ್ಯರು, ಶುಶ್ರೂಷಕರು, ಆಪ್ತ ಸಮಾಲೋಚಕರ ನೇಮಕಾತಿ ಸಂದರ್ಶನ ರದ್ದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎನ್.ಪಿ.ಸಿ.ಡಿ.ಸಿ.ಸ್/ ಎನ್.ಪಿ.ಹೆಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರು, ವೈದ್ಯರು, ಶುಶ್ರೂಷಕ / ಕಿಯರು ಹಾಗೂ ಆಪ್ತ ಸಮಾಲೋಚಕರ ನೇಮಕಾತಿಗಾಗಿ ಜುಲೈ 11 ರಂದು ನಡೆಸಲು ಉದ್ದೇಶಿಸಿದ್ದ ನೇರ ಸಂದರ್ಶನವನ್ನು  ರದ್ದುಗೊಳಿಸಲಾಗಿದೆ.

ನೇರ / ಗುತ್ತಿಗೆ ನೇಮಕಾತಿಯ ಸರ್ಕಾರದ ಮೀಸಲಾತಿಯನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ನೇರ ಸಂದರ್ಶನವನ್ನು  ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಹಾಗೂ ನೇಮಕಾತಿ ಸಮಿತಿಯ  ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button