Kannada NewsKarnataka NewsLatest

೨೦೧೯ ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಿಂದ ” ಜ್ಯೋತಿ ಬದಾಮಿ ದತ್ತಿ ಪುಸ್ತಕ ಪ್ರಶಸ್ತಿ”ಗಾಗಿ  ಕಥಾ ಸಂಕಲನ, ಹಾಸ್ಯ ಸಂಕಲನ, ಪ್ರಬಂಧ ಸಂಕಲನ, ಧಾರ್ಮಿಕ ಸಾಹಿತ್ಯ, ಕಾದಂಬರಿ ಹಾಗು ಇತರೆ ಗದ್ಯ ಸಾಹಿತ್ಯ ಕೃತಿಗಳನ್ನು ಪರಿಗಣಿಸಲಾಗುವುದು.

“ಲಿ.ಶ್ರೀಮತಿ ರಾಚಮ್ಮ ಪಾಟೀಲ (ಗಂದಿಗವಾಡ) ದತ್ತಿ ಪುಸ್ತಕ ಪ್ರಶಸ್ತಿ”ಗಾಗಿ ಕವನ ಸಂಕಲನ, ಚುಟುಕು ಸಂಕಲನ, ಹನಿಗವನ ಸಂಕಲನ, ಆಧುನಿಕ ವಚನ ಸಂಕಲನ, ಹೈಕುಗಳ ಸಂಕಲನಗಳನ್ನು ಪರಿಗಣಿಸಲಾಗುವುದು.
೧) ಕೃತಿಗಳು  ೨೦೧೯ ನೆಯ ಸಾಲಿನಲ್ಲಿ ಪ್ರಕಟಣೆಗೊಂಡಿರಬೇಕು.
೨) ತಲಾ ಎರಡು ಕೃತಿಗಳನ್ನು ಕಳಿಸಬೇಕು.
೩) ಬೆಳಗಾವಿ ಜಿಲ್ಲೆಯಲ್ಲಿ ವಾಸವಾಗಿರುವ  ಲೇಖಕಿಯರ  ಕೃತಿಗಳಿಗೆ  ಮಾತ್ರಈ ಪ್ರಶಸ್ತಿಗಳು ಮೀಸಲಾಗಿದೆ.
೪) ನಿರ್ಣಾಯಕರ ತೀರ್ಮಾನವೇ ಅಂತಿಮ.
೫) ಯಾವುದೇ ಪತ್ರವ್ಯವಹಾರಕ್ಕೆ ಅವಕಾಶವಿಲ್ಲ.
೬) ಪ್ರಶಸ್ತಿಯು ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿದೆ
೭) ಪ್ರಶಸ್ತಿಯನ್ನು ಮೇ-ಜೂನ್ ತಿಂಗಳಿನಲ್ಲಿ ಪ್ರದಾನ ಮಾಡಲಾಗುವುದು.
೮) ಕೃತಿಗಳನ್ನು ಕಳಿಸಲು ಅಂತಿಮ ದಿನಾಂಕ ೩೦-೦೩-೨೦೨೦
ಕೃತಿಗಳನ್ನು ಕಳಿಸುವ ವಿಳಾಸ
ಜ್ಯೋತಿ ಬದಾಮಿ # ಸೆಕ್ಟರ್- ೩
ಶಿವಬಸವ ನಗರ
ಬೆಳಗಾವಿ.೫೯೦೦೧೦
೯೮೮೬೧೫೭೧೩೫/ ೭೦೨೨೯೯೭೨೦೭

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button