ಪ್ರಗತಿವಾಹಿನಿ ಸುದ್ದಿ, ನೆಬ್ರಾಸ್ಕಾ: ಕಾರೊಂದು ಮರಕ್ಕೆ ಅಪ್ಪಳಿಸಿ ಅಪಘಾತಕ್ಕೀಡಾದ ನಂತರ ಅದರಲ್ಲಿದ್ದ ಐಫೋನ್ ಸ್ವಯಂಚಾಲಿತವಾಗಿ ಪೊಲೀಸ್ ತುರ್ತು ಸಹಾಯವಾಣಿಗೆ ಮಾಹಿತಿ ನೀಡಿದ ಘಟನೆ ಯುಎಸ್ ನಲ್ಲಿ ನಡೆದಿದೆ.
ಲಿಂಕನ್ ಬಳಿ ಭಾನುವಾರ ಕಾರೊಂದು ಮರಕ್ಕೆ ಅಪ್ಪಳಿಸಿ ಭೀಕರವಾಗಿ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಚಾಲಕ ಸೇರಿದಂತೆ ಹೋಂಡಾ ಅಕಾರ್ಡ್‌ನಲ್ಲಿದ್ದ ಐವರು ಪುರುಷರು ಮೃತಪಟ್ಟು ತೀವ್ರ ಗಾಯಗೊಂಡಿದ್ದ ಒಬ್ಬ ಮಹಿಳೆ ಆಸ್ಪತ್ರೆಗೆ ಸಾಗಿಸುವಾಗ ಅಸು ನೀಗಿದರು. ಇವರೆಲ್ಲ 22ರಿಂದ 24 ವಯಸ್ಸಿನವರಾಗಿದ್ದಾರೆ.
ಅಪಘಾತ ಸಂಭವಿಸುತ್ತಲೇ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರ ಐಫೋನ್ ಘಟನೆಯ ಸೂಕ್ಷ್ಮತೆಯನ್ನು ಗುರುತಿಸಿದೆ. ಅದರ ಮಾಲೀಕರು ಸ್ಪಂದಿಸದಿದ್ದಾಗ ಸ್ವಯಂಚಾಲಿತವಾಗಿ ಪೊಲೀಸ್ ಸಹಾಯವಾಣಿಯನ್ನು ಎಚ್ಚರಿಸಿದೆ ಎಂದು ಲಿಂಕನ್ ಪೋಲಿಸ್ ಸಹಾಯಕ ಮುಖ್ಯಸ್ಥ ಮೈಕೋನ್ ಮಾರೊ ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣಗಳನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಕೈಗೊಂಡಿದ್ದಾರೆ.
ಬುದ್ಧಿವಾದ ಹೇಳಿದ್ದಕ್ಕೆ ಕಾಂಗ್ರೆಸ್ ಮುಖಂಡನಿಗೆ ಚಾಕು ಇರಿತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ