ಪ್ರಗತಿವಾಹಿನಿ ಸುದ್ದಿ, ಬ್ರೆಸಿಲಿಯಾ: ಚಾರ್ಜರ್ ಹಾಗೂ ಎಡಾಪ್ಟರ್ ಗಳಿಲ್ಲದೇ ಬಂದ ಆ್ಯಪಲ್ ಫೋನ್ ಗಳನ್ನು ಬ್ರೆಜಿಲ್ ಸರಕಾರ ಸೀಜ್ ಮಾಡಿದೆ.
ಅನೇಕ ಬಿಡಿ ವಸ್ತುಗಳ ಮಾರಾಟದ ಅಂಗಡಿಗಳಲ್ಲಿ ಚಾರ್ಜರ್ ಹಾಗೂ ಎಡಾಪ್ಟರ್ ಗಳಿಲ್ಲದೇ ಮಾರಾಟವಾಗುತ್ತಿದ್ದ ಸಾವಿರಾರು ಆ್ಯಪಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ದೇಶದ ಗ್ರಾಹಕ ರಕ್ಷಣಾ ನಿಯಂತ್ರಕ ಚಾರ್ಜರ್ ಇಲ್ಲದೆ ಬರುವ ಐಫೋನ್‌ಗಳ ಮಾರಾಟವನ್ನು ನಿಷೇಧಿಸುವುದಾಗಿ ಇತ್ತೀಚೆಗಷ್ಟೇ ಘೋಷಿಸಿತ್ತು. ಗಮನಾರ್ಹವಾಗಿ, ಇನ್-ಬಾಕ್ಸ್ ಪವರ್ ಅಡಾಪ್ಟರ್‌ಗಳಿಲ್ಲದ ಐಫೋನ್‌ಗಳನ್ನು ಮಾರಾಟ ಮಾಡದಂತೆ ಆ್ಯಪಲ್ ನ್ನು ಬ್ರೆಜಿಲ್ ನಿರ್ಬಂಧಿಸಿದ್ದಷ್ಟೇ ಅಲ್ಲದೆ ನಗದು ದಂಡವನ್ನೂ ವಿಧಿಸಿದೆ.
ಅಂತಿಮ ನಿರ್ಧಾರಕ್ಕೆ ಬರುವವರೆಗೆ ಐಫೋನ್ ಮಾರಾಟವನ್ನು ಮುಂದುವರಿಸಲು ಅವಕಾಶ ನೀಡುವಂತೆ ದೇಶದ ಸರ್ಕಾರಕ್ಕೆ ಆಪಲ್ ಬ್ರೆಜಿಲ್ ಮನವಿ ಮಾಡಿದೆ.
ಏತನ್ಮಧ್ಯೆ ನ್ಯಾಯಾಧೀಶ ಡಿಯಾಗೋ ಕ್ಯಾಮಾರಾ ಅಲ್ವೆಸ್ ಅವರು ಆ್ಯಪಲ್‌ಗೆ ದೇಶದಲ್ಲಿ ಐಫೋನ್‌ಗಳ ಮಾರಾಟವನ್ನು ಅಂತಿಮ ತೀರ್ಪಿನವರೆಗೂ ಮುಂದುವರಿಸಲು ಅನುಮತಿಸಿದ್ದರು. ಮತ್ತು ಆ್ಯಪಲ್ ಯಾವುದೇ ಗ್ರಾಹಕ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಮೇಲ್ನೋಟಕ್ಕೆಕಂಡುಬಂದಿಲ್ಲ. ಇದಲ್ಲದೆ, ಬ್ರೆಜಿಲಿಯನ್ ನಿಯಂತ್ರಕ ಈ ನಿರ್ಧಾರದ ಮೂಲಕ ‘ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾಗುವಷ್ಟರಲ್ಲಿ ತೆರವುಗೊಂಡ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ