Latest
ಐಪಿಎಲ್ ಬೆಟ್ಟಿಂಗ್: ಮಾಜಿ ರಣಜಿ ಆಟಗಾರ ರಾಬಿನ್ ಬಂಧನ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮಾಜಿ ರಣಜಿ ಆಟಗಾರ ರಾಬಿನ್ ಮೊರಿಸ್ ಸೇರಿದಂತೆ ಮೂವರನ್ನು ಮುಂಬೈನ ವರ್ಸೊವಾ ಪೊಲೀಸರು ಬಂಧಿಸಿದ್ದಾರೆ.
ರಾಬಿನ್ ಮೊರಿಸ್, ಧಿರೇಂದ್ರ ಕುಲ್ಕರ್ಣಿ, ರೋಹಿತ್ ಬಾಬು ಬಂಧಿತ ಆರೋಪಿಗಳು. ರಾಬಿನ್ ಮೊರೊಸ್ ನಿವಾಸದಲ್ಲೇ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಹಲವು ಮೊಬೈಲ್, 2 ಟ್ಯಾಬ್, 9000 ರೂ ನಗದು ಹಣ ವಶಕ್ಕೆ ಪಡೆಯಲಾಗಿದೆ. ಬಂಧಿತರು ರಾಯಲ್ ಚಾಲೇಂಜರ್ಸ್ ಬೆಂಗಳೂರು-ಸನ್ ರೈಸ್ ಹೈದರಾಬಾದ್ ನಡುವಿನ ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು.




