*ಐಪಿಎಲ್ ಬೆಟ್ಟಿಂಗ್: ಇಬ್ಬರು ಬುಕ್ಕಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಐಪಿಎಲ್ ಪಂದ್ಯದ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಸಿಇಎನ್ ಠಾಣೆ ಪೊಲೀಸರು ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಸುರಪುರ ಗ್ರಾಮದ ಅರಳಹಳ್ಳಿ ಗ್ರಾಮದ ಶ್ರವಣ್ ಹಾಗೂ ಹುಣಸಗಿ ತಾಲೂಕಿನ ಹೆಬ್ಬಾಳ (ಕೆ) ಗ್ರಾಮದ ದೇವರಾಜ್ ಬಂಧಿತ ಆರೋಪಿಗಳು. ಇಬ್ಬರು ಬಂಧಿತರಿಂದ 5 ಮೊಬೈಲ್, ಸ್ವಿಫ್ಟ್ ಕಾರು, ಬ್ಯಾಂಕ್ ಖಾತೆಯಲ್ಲಿದ್ದ 11 ಲಕ್ಷ ರೂಪಾಯಿ ಸೀಜ್ ಮಾಡಲಾಗಿದೆ.Home add -Advt *ಮೂವರು ಉಗ್ರರು ಎನ್ ಕೌಂಟರ್ ನಲ್ಲಿ ಬಲಿ*