Karnataka NewsLatest

*ಐಪಿಎಲ್ ಬೆಟ್ಟಿಂಗ್: ಹಣ ಕಳೆದುಕೊಂಡು ಲಾಡ್ಜ್ ರೂಮಿನಲ್ಲೇ ಆತ್ಮಹತ್ಯೆಗೆ ಶರಣಾದ ಯುವಕ*

ಪ್ರಗತಿವಾಹಿನಿ ಸುದ್ದಿ: ಐಪಿಎಲ್ ಬೆಟ್ಟಿಂಗ್ ನಲ್ಲಿ ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಲಾಡ್ಜ್ ನಲ್ಲಿ ನಡೆದಿದೆ.

29 ವರ್ಷದ ಮುದಿಬಸವ ಮೃತ ಯುವಕ. ಮಸ್ಕಿ ತಾಲೂಕಿನ ಉದ್ಬಾಳ ಗ್ರಾಮದ ಯುವಕನಿಗೆ ಬೆಟ್ಟಿಂಗ್ ನಿಂದ ಹೆಚ್ಚು ಹಣಗಳಿಸಬಹುದು ಎಂದು ಐಪಿಎಲ್ ಬೆಟ್ಟಿಂಗ್ ಆರಂಭಿಸಿದ್ದ. ಇದರಿಂದ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ.

ಬೆಟ್ಟಿಂಗ್ ನಲ್ಲಿ ಸೋತು ಹಣ ಪಾವತಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ. ಸಾಲಗಾರರ ಕಿರುಕುಳ ಹೆಚ್ಚುತ್ತಿದ್ದಂತೆ ಸಿಂಧನೂರಿನ ಸಾಯಿ ರೆಸಿಡೆನ್ಸಿ ಲಾಡ್ಜ್ ನ ರೂಮಿನಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ.

Home add -Advt

ಮುದಿಬಸವ ಎಷ್ಟು ಹೊತ್ತಾದರೂ ರೂಮಿನ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು ಪರಿಶೀಲಿಸಿದಾಗ ಫ್ಯಾನ್ ಗೆ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಪತ್ತೆಯಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button