Kannada NewsKarnataka NewsNationalPolitics

*ಸೌದಿಯ ತೈಲ ಘಟಕದ ಮೇಲೆ ಇರಾನ್ ದಾಳಿ: ಭಾರತದಲ್ಲಿ ಇಂಧನ ದರ ಏರಿಕೆ ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಘರ್ಷಣೆಯ ನಡುವೆ ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾ ಕೇಂದ್ರ ಡೋನ್ ದಾಳಿಗೆ ಗುರಿಯಾಗಿದೆ. 

ಇರಾನ್‌ ‘ಶಾಹೆದ್-136’ ಮಾದರಿಯ ಆತ್ಮಹತ್ಯಾ ಡೋನ್‌ಗಳು ತೈಲ ಘಟಕದ ಮೇಲೆ ದಾಳಿ ನಡೆಸಿವೆ. ಈ ಘಟನೆಯ ನಂತರ ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸೌದಿ ಅರಾಮ್‌ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಹೀಗೆ ನುಗ್ಗಿಬಂದ ಬಹುತೇಕ ಡೋನ್‌ಗಳನ್ನು ತಡೆದಿದ್ದರೂ, ಈ ಪೈಕಿ ಕೆಲವು ಸಂಗ್ರಹಣಾ ಟ್ಯಾಂಕ್‌ಗಳ ಮೇಲೆ ಬಿದ್ದ ಕಾರಣ ದಟ್ಟ ಹೊಗೆ ಆವರಿಸಿತ್ತು. 

ಆದ್ರೆ ಈ ದಾಳಿಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸ್ಪಷ್ಟವಾಗಿ ಗೋಚರಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 9ರಷ್ಟು ಏರಿಕೆ ಕಂಡು, ಬ್ಯಾರೆಲ್‌ಗೆ 80 ಡಾಲರ್ ಮೀರಿದೆ.

ಇದರ ಪರಿಣಾಮವಾಗಿ ಭಾರತದಲ್ಲಿ ಇಂಧನ ದರ ಏರಿಕೆಯ ಸಾಧ್ಯತೆ ವ್ಯಕ್ತವಾಗಿದೆ. ಪೂರೈಕೆ ವ್ಯತ್ಯಯದ ಹಿನ್ನೆಲೆ ಭಾರತ ಸರ್ಕಾರ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ನಡೆಸುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button