Karnataka NewsUncategorized

ನಿಮ್ಮ ಆಧಾರ್- ಪಾನ್ ಲಿಂಕ್ ಆಗಿದೆಯಾ? ಇಲ್ಲಿ ಸರಳವಾಗಿ ಚೆಕ್ ಮಾಡಿ; ಲಿಂಕ್ ಮಾಡಿ; ಲಿಂಕ್ ಮಾಡಲು ಇನ್ನು 4 ದಿನ ಮಾತ್ರ ಬಾಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಮ್ಮ ಆಧಾರ್ ನಂಬರ್ ಜೊತೆ ಪಾನ್ ನಂಬರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ. 2017ರಿಂದಲೇ ಆಧಾರ್ – ಪಾನ್ ಲಿಂಕ್ ನಿಯಮ ಜಾರಿಗೆ ಬಂದಿದ್ದರೂ ಬಹಳಷ್ಟು ಜನರು ಇನ್ನೂ ಲಿಂಕ್ ಮಾಡಿಲ್ಲ. ಇದೇ ಮಾರ್ಚ್ 31ರೊಳಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಎಲ್ಲ ನಾಗರಿಕರ ವ್ಯವಹಾರಗಳ ಮೇಲೆ ನಿಗಾ ಇಡಲು, ಆದಾಯ ತೆರಿಗೆ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಈ ವ್ಯವಸ್ಥೆ ಜಾರಿಯಾಗುತ್ತಿದೆ. ಜೊತೆಗೆ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವುದನ್ನು ಪತ್ತೆ ಹಚ್ಚಲೂ ಇದು ನೆರವಾಗಲಿದೆ.

ಈಗಾಗಲೆ ಹಲವು ಬಾರಿ ಪಾನ್ – ಆಧಾರ್ ಲಿಂಕ್ ಗೆ ಗಡುವು ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ವಿಸ್ತರಣೆ ಇಲ್ಲ. ಲಿಂಕ್ ಮಾಡದವರಿಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆೆ.

*ಯಾರಿಗೆ ಪಾನ್‌ ಲಿಂಕಿಂಗ್ ನಿಂದ ವಿನಾಯಿತಿ:*

1) 80 ವರ್ಷ ಮೇಲ್ಪಟ್ಟವರು 

2) ಭಾರತೀಯ ಪ್ರಜೆ ಅಲ್ಲದವರು

3) ಅನಿವಾಸಿ ಭಾರತೀಯರು

4) ಜಮ್ಮು ಕಾಶ್ಮೀರ, ಅಸಾಂ ಮತ್ತು  ಮೆಘಾಲಯಾ ರಾಜ್ಯಕ್ಕೆ ಸೇರಿದವರು.

*ಪಾನ್ ಕಾರ್ಡ್ ಗೆ ಆಧಾರ್ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎಂದು ಚೆಕ್ ಮಾಡಲು ಲಿಂಕ್ ಇಲ್ಲಿದೆ*

https://eportal.incometax.gov.in/iec/foservices/#/pre-login/link-aadhaar-status

ನಿಮ್ಮ ಆಧಾರ್, ಪಾನ್ ಸಂಖ್ಯೆ ನಮೂದಿಸಿ.

*ಲಿಂಕ್ ಅಗಿಲ್ಲದಿದ್ದರೆ ಲಿಂಕ್‌ ಮಾಡುವುದು ಹೇಗೆ:*

Link: https://eportal.incometax.gov.in/iec/foservices/#/pre-login/bl-link-aadhaar

https://pragati.taskdun.com/cm-basavaraj-bommaividhanasoudhabasavannakempegowda-statue/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button