ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ನನ್ನ ಕರ್ತವ್ಯ – ಶಾಸಕಿ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಸರ್ಕಾರದ ಎಲ್ಲ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಆದ್ಯ ಕರ್ತವ್ಯ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಮಹಾತ ಗಲ್ಲಿಯ ವಾರ್ಡ್ ನಂ. ೨೧ & ೨೨ ರಲ್ಲಿ ೧೫ನೇ ಹಣಕಾಸಿನ ಯೋಜನೆಯಡಿ ೬.೪ ಲಕ್ಷ ರೂ. ವೆಚ್ಚದ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಜತ್ರಾಟ ವೇಸ್‌ನ ವಾರ್ಡ್ ನಂ. ೬ ರಲ್ಲಿ ಎಸ್.ಎಸ್.ಸಿ. ಯೋಜನೆಯ ೫ ಲಕ್ಷ ರೂ. ಅನುದಾನದ ಪೆವರ್ ಬ್ಲಾಕ್ ಅಳವಡಿಸುವ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಯಾವುದೇ ಸಮಸ್ಯೆಗಳು, ಕುಂದು ಕೊರತೆಗಳು ಇದ್ದಲ್ಲಿ ಅವುಗಳನ್ನು ಗಮನಕ್ಕೆ ತಂದಲ್ಲಿ ನಿವಾರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಹೊಸ ಶಾಲಾ ಕೊಠಡಿಗಳ ಉದ್ಘಾಟಣೆ:
ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ವಿಶೇಷ ಗಮನ ಹರಿಸಲಾಗಿದೆ. ಕನ್ನಡ ಮತ್ತು ಮರಾಠಿ ವಿದ್ಯಾಲಯಗಳ ೩೦೦ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜತೆಗೆ ಶೌಚಾಲಯಗಳು ಮತ್ತು ನೀರಿನ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಪೂರಕ ಕಲಿಕಾ ವಾತಾವರಣಕ್ಕಾಗಿ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಸುಸಜ್ಜಿತ ಹಾಗೂ ಗುಣಮಟ್ಟದಿಂದ ನಿರ್ಮಿಸುವುದು ಅಗತ್ಯ ಎಂದು ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು.
ನಗರದ ಸರ್ಕಾರಿ ಕನ್ನಡ ಪ್ರೌಢ ಶಾಲೆಯ ಎರಡು ಹೊಸ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ೩೧.೫೦ ಲಕ್ಷ ರೂ.ಗಳ ಅನುದಾನದಲ್ಲಿ ಈ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಸದ್ದಾಂ ನಗಾರಜಿ, ಮಹಾದೇವ ಕಾಂಬಳೆ, ಕಿಸಾನ್ ತಾಟೆ, ಅರುಣಾ ಮುದುಕುಡೆ, ಕಾವೇರಿ ಮಿರ್ಜೆ, ಕಲ್ಪನಾ ಬೊಂಗಾಳೆ, ಅಭಿಜೀತ್ ಮುದುಕುಡೆ, ದೀಪಕ ಖಟಾವಕರ, ಮಹಾದೇವ ಸುತಾರ, ಉದಯ ಚವ್ಹಾಣ, ವಿಶಾಲ ಡಾಂಗ್ರೆ, ನೀತಾ ಬಾಗ್ಡೆ, ಭೀಮರಾವ ಚಿಂಚಣೆ, ಪ್ರಭಾವತಿ ಸೂರ್ಯವಂಶಿ, ವಿಭಾವರಿ ಖಾಂಡ್ಕೆ, ಸಾಗರ್ ಮಿರ್ಜೆ, ಅವಿನಾಶ ಮಾನೆ, ಮಹಾದೇವ ಚವ್ಹಾಣ, ವಿಜಯ ಟವಳೆ, ಮಹೇಶ ಸೂರ್ಯವಂಶಿ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ