Kannada NewsKarnataka NewsPolitics

*ಡಿಕೆಶಿ ಸಿಎಂ ಅಗೋದು ಬಹಳ ಕಷ್ಟ; ಮಾಜಿ ಶಾಸಕ ಸಿ.ಎಂ. ಲಿಂಗಪ್ಪ*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿಕೆ ಶಿವಕುಮಾರ ಅವರು, ಖಂಡಿತವಾಗಿಯೂ ಸಿಎಂ ಆಗೋದು ವಾಸ್ತವವಾಗಿ ಕಷ್ಟವಿದೆ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು, ಡಿಕೆಶಿ ನಂಗೆ ಅತ್ಯಾಪ್ತರು. ನನ್ನ ಹೇಳಿಕೆ ಅವರಿಗೆ ಬೇಸರ ತರಿಸಬಹುದು. ಆದ್ರೆ, ಡಿಕೆಶಿ ಮುಖ್ಯಮಂತ್ರಿ ಆಗೋದು ಈ ಕಾಲಘಟ್ಟದಲ್ಲಿ ಕಷ್ಟ ಎಂದರು.

ಹೈ ಕಮಾಂಡ್ ಅವರ ಮನವೊಲಿಸಬಹುದು. ಪಕ್ಷವನ್ನು ಸಂಘಟಿಸಿ ಮತ್ತೊಮ್ಮೆ ಅಧಿಕಾರಕ್ಕೆ ತೆಗೆದುಕೊಂಡು ಬನ್ನಿ ಎಂದು ಹೇಳಬಹುದು. ಒಂದು ವೇಳೆ ಅಧಿಕಾರಕ್ಕೆ ಬಂದ್ರೆ ಡಿಕೆಶಿಗೆ ಸಿಎಂ ಚಾನ್ಸ್ ಸಿಗಬಹುದು ಎಂದು ಲಿಂಗಪ್ಪ ಹೇಳಿದರು.

ಡಿಕೆಶಿ ಮುಂಚಿನಿಂದಲೂ ಜನರ ಮಧ್ಯೆ ಇಲ್ಲ. ನಾನು ಅವರಿಗೆ ಬಹಳಷ್ಟು ಸಲಹೆ ನೀಡಿದ್ದೇನೆ. ಕನಿಷ್ಠ ದಿನಕ್ಕೆ ಒಂದು ಗಂಟೆಯದರೂ ಜನರ ಜತೆ ಕಾಲ ಕಳೆಯಿರಿ ಎಂದು ಹೇಳಿದ್ದೇನೆ. ಒಬ್ಬರು ನಮಸ್ಕಾರ ಅಂದ್ರೆ ಅವರು ನಮಸ್ಕಾರ ಅನ್ನೋದಿಲ್ಲ. ಈ ವರ್ತನೆಯೇ ಅವರಿಗೆ ಮುಳ್ಳು. ಸಿಎಂ ಆಗದಿರಲು ಶಾಸಕರ ವಿಶ್ವಾಸಗಳಿಸದೇ ಇರೋದು ಕೂಡ ಪ್ರಮುಖ ಕಾರಣ ಎಂದು ಲಿಂಗಪ್ಪ ಹೇಳಿದರು.

Home add -Advt

Related Articles

Back to top button