
ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆನಗರಿ ಮೈಸೂರಿನಲ್ಲಿ ಹಲವೆಡೆಗಳಲ್ಲಿ ಐಟಿ ಅಧಿಕಾರಿಗಳಿ ದಾಳಿ ನಡೆಸಿದ್ದಾರೆ. ಕೆ.ಸುಬ್ರಹ್ಮಮಣ್ಯ ರೈ ಅವರ ನಿವಾಸ, ಹಲವು ಸಿಹಿ ತಿಂಡಿ ಮಲಿಗೆ, ಬಾಂಬೆ ಟಿಫನೀಸ್ ಸೇರಿದಂತೆ ವಿವಿಧೆಡೆಗಳಲ್ಲಿ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಕೆ.ಸುಬ್ರಹ್ಮಣ್ಯ ರೈ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿಯಲ್ಲಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಮನೆಯ ಅಂಗಳದಲ್ಲಿದ್ದ ಮಾವಿನ ಮರದಲ್ಲಿದ್ದ ಮಾಹಿನ ಹಣ್ಣಿನ ಬಾಕ್ಸ್ ನಲ್ಲಿ ಸುಮಾರು 1 ಕೋಟಿ ಹಣ ಪತ್ತೆಯಾಗಿದೆ.
ಮರದ ಮೇಲಿನ ಬಾಕ್ಸ್ ನೋಡಿದ ಅಧಿಕಾರಿಗಳು ಅನುಮಾನಗೊಂಡು ಬಾಕ್ಸ್ ಪರಿಶೀಲಿಸಿದಾಗ ಮಾವಿನ ಹಣ್ಣಿನ ಬಾಕ್ಸ್ ನಲ್ಲಿ ಹಣ್ಣಿನ ಬದಲಾಗಿ ಕಂತೆ ಕಂತೆ ಹಣ ಕಂಡುಬಂದಿದೆ. ಸುಮಾರು ಒಂದು ಕೋಟಿ ಇರಬಹುದು ಎನ್ನಲಾಗಿದೆ.
ಕೆ.ಸುಬ್ರಹ್ಮಣ್ಯ ರೈ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ಅವರ ಸಹೋದರ ಎಂದು ಹೇಳಲಾಗುತ್ತಿದೆ. ಚುನಾವಣೆ ಹೊತ್ತಲ್ಲೇ ಐಟಿ ಅಧಿಕಾರಿಗಳು ರಾಜಕೀಯ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ