
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಆದಾಯ ತೇರಿಗೆ ಇಲಾಖೆಯ ಅಧಿಕಾರಿಗಳು 4 ಕಡೆ ರೇಡ್ ಮಾಡುವ ಮೂಲಕ ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ.
ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಇನ್ನೂ ಇಬ್ಬರು ಉದ್ಯಮಿಗಳ ಮನೆ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಗೋವಾ, ಬೆಂಗಳೂರು ಅಧಿಕಾರಿಗಳಿಂದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ನಿವಾಸದ ಮೇಲೆ ದಾಳಿ ನಡೆದಿದೆ. ಇಬ್ಬರೂ ಸಕ್ಕರೆ ಕಾರ್ಖಾನೆ, ಐರನ್ ಹಾಗೂ ಗ್ರೈನೆಟ್ ಉದ್ಯಮಿಗಳಾಗಿದ್ದಾರೆ. ಐರನ್ ಹಾಗೂ ಗ್ರೈನೆಟ್ ದೇಶ- ವಿದೇಶಗಳಿಗೆ ದೊಡ್ಡಣ್ಣವರ ಸಹೋದರರು ರಪ್ತು ಮಾಡುವ ಉದ್ಯಮಹೊಂದಿದ್ದಾರೆ. ಅಲ್ಲದೇ ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆ ಕೂಡ ಹೊಂದಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಈ ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ